ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ಇವತ್ತೇಳನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 58
ಮಲೆಕಣಿವೆಗಳ ಬೆರಗು ಪ್ರಕೃತಿಕೋಪದ ಗುಡುಗು |
ಕೆಳೆಯೊಲವು ನಲ್ಲೆಯ ವಿಯೋಗವಿಂತಹವು ||
ನಿಲಿಸಿ ಮನದೋಟವನು ಮೂಕಗೋಳಿಪುವೆನ್ನ |
ನೊಳದನಿಯದೊಂದರಿಂ - ಮಂಕುತಿಮ್ಮ ।|
ಮಂಕುತಿಮ್ಮನ ಕಗ್ಗ ಪದ್ಯ- 58 ರ ಅರ್ಥ
ಬೆಟ್ಟ ಗುಡ್ಡಗಳು. ಅವುಗಳ ನಡುವಿನ ಕಣಿವೆಗಳು.ಇವುಗಳ ನೋಟ.
ಪ್ರಕೃತಿ ಕೋಪಗೊಂಡಿದೆಯೇನೋ ಎಂದು ಸುರಿಯುವ ಮಳೆ. ಜೊತೆಗೆ ಗುಡುಗು ಮಿಂಚುಗಳು.
ಗೆಳೆಯರ ಪ್ರೀತಿ, ವಾತ್ಸಲ್ಯ. ನಲ್ಮೆಯ ಪ್ರಿಯತಮೆಯ ಅಗಲಿಕೆ.
ಇಂತಹ ವಿಶೇಷಗಳು ನನ್ನ ಮನಸಿನ ಓಟವನ್ನು ಹಿಡಿದು ನಿಲ್ಲಿಸಿವೆ.
ಮನಸಿನ ಒಳದನಿಯೊಂದು ನನ್ನನ್ನು ಮೂಕಗೊಳಿಸಿದೆ.
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Fifty-Seventh verse.
Mankutimmana Kagga Verse -58 In English
Malekanivegala beragu prakrutikopada gudugu |
keleyolavu nalleya viyogavintahavu ||
nilisi manadoṭavanu mookagolipuvuvenna |
noladaniyadondarim - Mankutimma ||
Mankutimmana Kagga Verse -58 Meaning In English
There are hills.There are valleys between them. The sight of these.
Rain that looks like nature is getting angry. Thunder and lightning.
Love of friends, affection. Separation of a lover.
All the above features have stopped my mind racing. My inner voice has silenced me.
Want to improve yourself, see other Verses of Makutimmana Kagga By Clicking Below Links