ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ಐವತ್ತೊಂದನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 52
ಗಗನನೀಲಿಮೆಯೆನ್ನ ಕಣ್ಗೆ ಸೊಗವೀವಂತೆ |
ಮುಗಿವ ತರಣಿಯ ರಕ್ತ ಹಿತವೆನಿಸದೇಕೋ ! ||
ಸೊಗದ ಮೂಲವದೆಲ್ಲಿ ನೀಲದೊಳು ಕೆಂಪಿನೊಳೊ|
ಬಗೆವೆನ್ನ ಮನಸಿನೊಳೊ ? - ಮಂಕುತಿಮ್ಮ ||
ಮಂಕುತಿಮ್ಮನ ಕಗ್ಗ ಪದ್ಯ- 52 ರ ಅರ್ಥ
ಆಗಸದ ನೀಲಿ ಬಣ್ಣ. ಅದು ಮನಕೆ ಹಿತ.
ಮುಳುಗುವ ಸೂರ್ಯನ ಬಣ್ಣ ಕೆಂಪು. ನೋಡಲು ಅದ್ಭುತ ದೃಶ್ಯ. ಆದರೆ ಮನಸಿಗೆ ಹಿತವಲ್ಲ. ಯಾಕೋ?
ಈ ನನ್ನ ಮನಸಿನ ಭಾವನೆ, ಸೊಗಸಿನ ಭಾವದ ಮೂಲ, ಎಲ್ಲಿವೆ? ಆ ನೀಲಿಯಲ್ಲೋ?ಕೆಂಪಿನಲ್ಲೋ?
ಅಥವಾ ಇದನೆಲ್ಲ ನೋಡಿ ಅನುಭಸಿವ ಮನದಲ್ಲೋ?
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Fifty frist verse.
Mankutimmana Kagga Verse -52 In English
Gagananeelimeyenna kange sogaveevante
mugiva taraniya rakta hitavenisadeko !
Sogada moolavadelli neeladolu kempinolo
bagevenna manasinolo? - Mankutimma
Mankutimmana Kagga Verse -52 Meaning In English
Sky is blue. That's color is pleasant to me.
The color of the setting sun is red. A wonderful sight to behold. But not pleasant to the mind. Why?
Where is this feeling of my mind, the source of elegant feeling? Is that in blue? in Red?
Or is it in the mind of the one who sees and enjoys all this?
Want to improve yourself, see other Verses of Makutimmana Kagga By Clicking Below Links