ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ಹದಿನೆಂಟನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 19
ಗಾಳಿ ಮಣ್ಣುಉಂಡೆಯೊಳಹೊಕ್ಕು ಹೊರಹೊರಳಲದು |
ಆಳೆನಿಪುದಂತಾಗದಿರೆ ಬರಿಯ ಹೆಂಟೆ ||
ಬಾಳೇನು ಧೂಳು ಸುಳಿ,ಮರ ತಿಕ್ಕಿದುರಿಯ ಹೊಗೆ |
ಕ್ಷವೆಳವೇನಮೃತವೇಂ - ಮಂಕುತಿಮ್ಮ ||
ಮಂಕುತಿಮ್ಮನ ಕಗ್ಗ ಪದ್ಯ- 19 ರಅರ್ಥ
ಮಣ್ಣಿನ ಉಂಡೆಯ ಒಳಗೆ ಗಾಳಿ ಹೋಯಿತೆಂದರೆ ಅದಕ್ಕೆ ಆಚೆ ಬರಲು ಆಗುವದಿಲ್ಲ.
ಮನುಷ್ಯನಲ್ಲೂ ಸಹ ಈ ಗಾಳಿ (ಉಸಿರಾಟ) ಇರದಿದ್ದರೆ ಅವನು ಕೇವಲ ಒಂದು ಮಣ್ಣಿನ ಹೆಂಟೆ (ಚೇತನ ಇಲ್ಲದ ಜಡ) ಇದ್ದಂತೆ.
ಈ ಬಾಳು ಬರೀ ಧೂಳು, ಸುಳಿ ಹಾಗು ಕಟ್ಟಿಗೆ ತಿಕ್ಕಿದರೆ ಬರುವ ಉರಿಯ ಹೊಗೆ.
ಪರಿಸ್ಥಿತಿ ಹೀಗಿರುವಾಗ ಅಮೃತವಿದ್ದರೇನು, ವಿಷವಿದ್ದರೇನು? ಎರಡೂ ಒಂದೇನೇ. ಏನೂ ವ್ಯತ್ಯಾಸವಾಗುವದಿಲ್ಲ.
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Eighteenth verse.
Mankutimmana Kagga Verse -19 In English
Gali mannundeyolahokku horahoralaladu |
alenipudantagadire bariya hente ||
balenu dhulu suli,mara tikkiduriya hoge |
kshavelavenamrutavem - Mankutimma ||
Mankutimmana Kagga Verse -19 Meaning In English
When the air enters into the lump of clay, it can not come out of it..
If a man does not have this air within him (breathing),he is just like a handful of clay.
This life is just dust, vortex and smoke, which comes out when we rub wood pieces.
If such is the condition, what is the difference of having poison on amruta? Both are the same. Nothing makes a difference.
See other Verses of Makutimmana Kagga By Clicking Below Links