Blog : Manku Timmana Kagga | Badukigar Nayakaru | Verse 7 | Meaning In Kannada | English
Manku Timmana Kagga | Badukigar Nayakaru | Verse 7 | Meaning In Kannada | English

ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)

ಆರನೇಯ ಪದ್ಯ ಆಗಲೇ ನೋಡಿದ್ದೇವೆ.

 

ಮಂಕುತಿಮ್ಮನ ಕಗ್ಗ ಪದ್ಯ- 7

ಬದುಕಿಗಾರ್ ನಾಯಕರು,ಏಕನೊ ಅನೇಕರೋ? |
ವಿಧಿಯೋ ಪೌರುಷವೋ ಧರುಮವೊ ಅಂಧಬಲವೋ? ||
ಕುದುರುವುದದೆಂತು ಈಯವ್ಯವಸ್ಥೆಯ ಪಾಡು ? 
ಅದಿಗುದಿಯೆ ಗತಿಯೇನೋ? - ಮಂಕುತಿಮ್ಮ ||

 

ಮಂಕುತಿಮ್ಮನ ಕಗ್ಗ ಪದ್ಯ- 7 ರಅರ್ಥ

ಈ ಜೀವನಕ್ಕೆ ಯಾರು ನಾಯಕರು ? ಒಬ್ಬನೇ ಒಬ್ಬನೋ ಅಥವಾ ಬಹಳ ಜನ ನಾಯಕರು ಇದ್ದಾರೆಯೋ ? ವಿಧಿಯೋ, ಪುರುಷ ಪ್ರಯತ್ನವೋ? ಧರ್ಮದ ಶಕ್ತಿಯೋ ಅಥವಾ ಬರೀ ಒಂದು ಅಂಧ ಬಲವೋ? ಈ ಅವ್ಯವಸ್ಥೆಯ ಪಾಡು ಸರಿಯಾಗುವದು ಹೇಗೆ? ಅಥವಾ , ಈ ತಳಮಳದಲ್ಲಿಯೇ ನಾವು ಯಾವಗಲೂ ಇರಬೇಕೆ ?

-----------------------------------------------------------------------

Manku Timmana Kagga In Englilsh

Written By : Shri D.V.Gundappa (DVG)

 

We have already seen Sixth verse. 

 

Mankutimmana Kagga Verse -7 In English

Badukigar nayakaru,ekano anekaro? |
Vidhiyo paurushavo dharumavo andhabalavo? ||
Kuduruvudadentu iyavyavastheya padu? |
Adigudiye gatiyeno? - Mankutimma || 

 

Mankutimmana Kagga Verse -7 MeaninIn English

Who is the leader for this life? Is there only one or are there many leaders? Is it Fate or human effort? Is religion a force or just a blind force? How can this chaos be corrected? Or should we stay in this confusion for ever?