ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ಹದಿಮೂರನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 14
ಒಂದೇ ಗಗನವ ಕಾಣುತೊಂದೆ ನೆಲವನು ತುಳಿಯು |
ತೊಂದೆ ಧಾನ್ಯವನುಣ್ಣು ತೊಂದೆ ನಿರ್ಗುಡಿದು ||
ಒಂದೆ ಗಾಳಿಯನುಸಿರ್ವ ನರಜಾತಿಯೊಳಗೆಂತು|
ಒಂದುದೀ ವೈಷಮ್ಯ ? - ಮಂಕುತಿಮ್ಮ ||
ಮಂಕುತಿಮ್ಮನ ಕಗ್ಗ ಪದ್ಯ- 14 ರಅರ್ಥ
ಈ ಜಗತ್ತಿನಲ್ಲಿರುವವರೆಲ್ಲರೂ ಉಸಿರಾಡುವ ಗಾಳಿ, ಓಡಾಡುವ ನೆಲ, ಕುಡಿಯುವ ನೀರು ಮತ್ತು ನೋಡುವ ಆಕಾಶ ಒಂದೇ. ಹೀಗಿರಲು ಮನುಷ್ಯರ ನಡುವೆ ದ್ವೇಷ ,ವಿರಸ, ಹೇಗೆ ಆಯಿತೋ ತಿಳಿಯದು.
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Thirteenth verse.
Mankutimmana Kagga Verse -14 In English
Onde gaganava kanutonde nelavanu tuliyu |
tonde dhanyavanunnu tonde nirgudidu ||
onde galiyanusirva narajatiyolagentu |
ondudī vaishamya? - Mankutimma ||
Mankutimmana Kagga Verse -14 Meaning In English
Everyone in this world breathes one air, moving on one ground, drinking one water, and the sky is the same.
Eventhen , why there is no hatredness among men, not able to understand this.