Blog : Manku Timmana Kagga | Muttiruvudindu | Verse 11 | Meaning In Kannada | English
Manku Timmana Kagga | Muttiruvudindu | Verse 11 | Meaning In Kannada | English

ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)

ಹತ್ತನೇಯ ಪದ್ಯ ಆಗಲೇ ನೋಡಿದ್ದೇವೆ.

 

ಮಂಕುತಿಮ್ಮನ ಕಗ್ಗ ಪದ್ಯ- 11

ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ ।
ಮೃತ್ಯು ಕುಣಿಯುತಲಿಹನು ಕೇಕೆಹಾಕುತಲಿ ।।
ಸುತ್ತಿಪುದು ತಲೆಯನನುದಿನದ ಲೋಕದವಾರ್ತೆ ।
ಎತ್ತಲಿದಕೆಲ್ಲ ಕಡೆ ?- ಮಂಕುತಿಮ್ಮ

 

ಮಂಕುತಿಮ್ಮನ ಕಗ್ಗ ಪದ್ಯ- 11 ರಅರ್ಥ

ಈಗ ಪ್ರಪಂಚವನ್ನೆಲ್ಲ ದುರ್ದೈವ ಆವರಿಸಿಕೊಂಡಿದೆ. ಎಲ್ಲ ಕಡೆ ಸಾವು ನೋವುಗಳು ಆಗುತ್ತಿವೆ. ಮೃತ್ಯು ದೇವತೆ ಕುಣಿಯುತ್ತಲಿದ್ದಾನೆ.
ಪ್ರತೀ ದಿನವೂ ಪತ್ರಿಕೆಗಳಲ್ಲಿ ಬರಿ ಸಾವು ನೋವು, ಯುದ್ಧ, ಮೋಸ, ವಂಚನೆಯ ಸುದ್ದಿಯನ್ನು ಓದಿ ತಲೆಯೆಲ್ಲಾ ಕೆಟ್ಟ ಸುದ್ದಿ ಆವರಿಸಿದೆ.
ಇದಕೆಲ್ಲ ಕೊನೆ ಯಾವಾಗ?

ಇಂದಿನ ಕಾಲಕ್ಕೂ ಇದು ಪ್ರಸ್ತುತ. ಕೊರೋನಾ ಮಹಾಮಾರಿ, ಯುದ್ಧದ ಭೀತಿ, ಮೋಸ, ಭ್ರಷ್ಟಾಚಾರ ಇವುಗಳಲ್ಲೇ ನಾವು ಮುಳುಗಿದ್ದೇವೆ.

-----------------------------------------------------------------------

Manku Timmana Kagga In Englilsh

Written By : Shri D.V.Gundappa (DVG)

 

We have already seen Tenth verse. 

 

Mankutimmana Kagga Verse -11 In English

Muttiruvudindu bhoomiyanondu durdaiva |
mrutyu kuniyutalihanu kekehakutali ||
suttipudu taleyananudinada lokadavarte |
ettalidakella kade?- Mankutimma ||

 

Mankutimmana Kagga Verse -11 MeaninIn English

The whole world is now covered with evil. Deaths are everywhere. The god of death is roaring.
Every day in the newspapers, the headlines of death, pain, war, cheating, and deception are all over the head.
When is the end of all this?

It is relevent in current days as well. We are drowned in the impact of corona, the horrors of war, deceit and corruption.