ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ಒಂಬತ್ತನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 10
ಏನು ಪ್ರಪಂಚವಿದು | ಏನು ಧಾಳಾಧಾಳಿ ! |
ಏನದ್ಭುತಾಪಾರಾಶಕ್ತಿ ನಿರ್ಘಾತ ||
ಮಾನವನ ಗುರಿಯೇನು ? ಬೆಲೆಯೇನು ? ಮುಗಿವೇನು ? |
ಏನರ್ಥವಿದಕೆಲ್ಲ - ಮಂಕುತಿಮ್ಮ ||
ಮಂಕುತಿಮ್ಮನ ಕಗ್ಗ ಪದ್ಯ- 10 ರಅರ್ಥ
ಈ ಪ್ರಪಂಚ ಎನ್ನುವದು ಏನು? ಏನು ಮುತ್ತಿಗೆಗಳು? ಎಷ್ಟು ಅದ್ಭುತವಾದ ಅಪಾರವಾದ ಶಕ್ತಿ ಇದರಲ್ಲಿ ಅಡಗಿದೆ. ಈ ಪ್ರಪಂಚ ಎಲ್ಲರಿಗೂ ಜೋರಾದ ಹೊಡೆತಗಳನ್ನು ಕೊಡುತ್ತಿದೆ.
ಇಷ್ಟೆಲ್ಲಾ ಇದ್ದರೂ ಈ ಮನುಷ್ಯನ ಗುರಿ ಏನು? ಅವನ ಬೆಲೆ ಏನು? ಇದಕ್ಕೆ ಅಂತ್ಯ ಏನು?
ಇದಕ್ಕೆಲ್ಲ ಅರ್ಥ ಏನು? ಏನೂ ತಿಳಿಯುತ್ತಿಲ್ಲ.. ಎಲ್ಲವೂ ಅಸ್ಪಷ್ಟ !!
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Ninth verse.
Mankutimmana Kagga Verse -10 In English
Enu prapanchavidu। Enu dhaladhali! |
Enadbhutaparashakti nirghata ||
Manavana guriyEnu? BeleyEnu? MugivEnu? |
Enarthavidakella - Mankutimma||
Mankutimmana Kagga Verse -10 Meaning In English
What is this world? What sieges? What a tremendous power lies in world. The world is giving everyone mighty shots again and again.
Even then ,What is this man's goal, What's his value? What is the end of all this?
What does this mean? Nothing is known.. Everything is vague !!