ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ಎಂಟನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 9
ಏನು ಭೈರವಲೀಲೆಯೀ ವಿಶ್ವಭ್ರಮಣೆ ! |
ಏನು ಭೂತಗ್ರಾಮನರ್ತನೋನ್ಮಾದ ! ||
ಏನಗ್ನಿ ಗೋಳಗಳು ! ಏನಂತರಾಳಗಳು ! |
ಏನು ವಿಸ್ಮಯ ಸೃಷ್ಟಿ ! - ಮಂಕುತಿಮ್ಮ ||
ಮಂಕುತಿಮ್ಮನ ಕಗ್ಗ ಪದ್ಯ- 9 ರಅರ್ಥ
ಈ ವಿಶ್ವದ ತಿರುಗಾಟ ಎನ್ನುವದು ಒಂದು ಭೀಕರವಾದ ಆಟವೇ ಸರಿ. ಏನು ಪಂಚ ಮಹಾಭೂತಗಳ ಮತ್ತು ನಾನಾ ಪ್ರಾಣಿ-ಚೈತನ್ಯಗಳ ಹುಚ್ಚಾಡಿಸುವ ನೃತ್ಯ ! ಏನು ಬೆಂಕಿಯ ಗೋಳಗಳು ! ಏನು ಅವುಗಳ ನಡುವಿನ ಅವಕಾಶಗಳು ! ಈ ಸೃಷ್ಟಿಯೆನ್ನುವದು ನೋಡಲಿಕ್ಕೆ ಎಷ್ಟು ಆಶ್ಚರ್ಯಕರವಾಗಿದೆ !
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Eighth verse.
Mankutimmana Kagga Verse -9 In English
Enu bhairavaleeleyi vishvabhramane! ।
Enu bhootagramanartanonmada! ।।
Enagni golagalu! Enantaralagalu! ।
Enu vismaya srushti! - Mankutimma।।
Mankutimmana Kagga Verse -9 Meaning In English
The wanderlust of this world is an awful game. What an insane dance of Pancha Mahabhuthas and myriad animalistic beings! What spheres of fire! What opportunities between them! Amazing how this works ..