ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ಏಳನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 8
ಕ್ರಮವೊಂದು ಲಕ್ಷ್ಯವೊಂದುಂಟೇನು ಸೃಷ್ಟಿಯಲಿ ? |
ಭ್ರಮಿಪುದೇನಾಗಗ ಕರ್ತೃವಿನ ಮನಸು? ||
ಮಮಮತೆಯುಳ್ಳವನಾತನಾದೊಡೀ ಜೀವಗಳು |
ಶ್ರಮಪಡುವುವೇಕಿಂತು ? - ಮಂಕುತಿಮ್ಮ ||
ಮಂಕುತಿಮ್ಮನ ಕಗ್ಗ ಪದ್ಯ- 8 ರಅರ್ಥ
ಈ ಭಗವಂತನ ಸೃಷ್ಟಿಯಲ್ಲಿ ಒಂದು ಕ್ರಮ ಮತ್ತು ಗುರಿ ಏನಾದರೂ ಇದೆಯೇ? ಈ ಸೃಷ್ಟಿಕರ್ತನ ಮನಸ್ಸು ಆಗಾಗ ಎಲ್ಲೆಲ್ಲೋ ಹರಿದಾಡುತ್ತದೇನು? ಅವನದು ಚಂಚಲ ಮನಸ್ಸೇ? ತಾನು ಸೃಷ್ಟಿಸಿದ ಜೀವಿಗಳ ಮೇಲೆ ಅವನಿಗೆ ಪ್ರೀತಿ ಮತ್ತು ವಾತ್ಸಲ್ಯಗಳು ಇವೆ ಎಂದಾದರೆ ಈ ಜೀವಿಗಳು ಏಕೆ ಈ ರೀತಿ ಜೀವನದಲ್ಲಿ ಕಷ್ಟಗಳನ್ನು ಅನುಭವಿಸುತ್ತಾರೆ?
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Seventh verse.
Mankutimmana Kagga Verse -8 In English
Kramavondu lakshyavonduntenu srushtiyali? |
Bhramipudenagaga kartruvina manasu? ||
Mamamateyullavanatanadodi jeevagalu |
shramapaduvuvekintu? - Mankutimma ||
Mankutimmana Kagga Verse -8 Meaning In English
Is there a process and goal in the creation of Lord? How often does the mind of this Creator flow? Is he fickle? If he has love and affection for the creatures he has created, why do these creatures suffer in this way in their lives?