ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ಎರಡನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 3
ಇಹುದೋ ಇಲ್ಲವೋ ತಿಳಿಯಕೊಡದೊಂದು ವಸ್ತು ನಿಜ ।
ಮಹಿಮೆಯಿಂ ಜಗವಾಗಿ ಜೀವ ವೇಷದಲಿ ।।
ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ ।
ಗಹನ ತತ್ವಕೆ ಶರಣೋ - ಮಂಕುತಿಮ್ಮ
ಮಂಕುತಿಮ್ಮನ ಕಗ್ಗ ಪದ್ಯ- 3 ರಅರ್ಥ
ಇದೆಯೋ ಇಲ್ಲವೋ, ನಮಗೆ ತಿಳಿಯಗೊಡದ ಒಂದು ವಸ್ತು, ತನ್ನ ಸ್ವಂತ ಮಹಿಮೆಯಿಂದ ಜಗತ್ತು ಎಂದಾಗಿ, ಜೀವಿಗಳ ವೇಷದಲ್ಲಿ ವಿಹರಿಸುತ್ತಿದೆ ಒಳ್ಳೆಯದು ಎನ್ನುವುದು ನಿಶ್ಚಯ ಮತ್ತು ಸತ್ಯವಾದರೆ, ಆ ರಹಸ್ಯವಾದ ತತ್ವಕ್ಕೆ ಶರಣಾಗು ಎಂದು ಡಿ.ವಿ.ಜಿ. ಹೇಳುತ್ತಾರೆ.
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Second verse.
Mankutimmana Kagga Verse -3 In English
Ihudō illavō tiḷiyakoḍadondu vastu nija।
mahimeyiṁ jagavāgi jīva vēṣadali।।
viharipudadoḷḷitembudu nisadavādoḍā।
gahana tatvake śaraṇō - maṅkutim'ma
Mankutimmana Kagga Verse -3 Meaning In English
One 'thing' or material, which is there or not we are not sure. But that 'thing' by its own glory, became the 'world'.
And then that 'thing' is wandering and enjoying in the guise of living beings. If that 'thing' is good, confirmed and true, then bow to that secret and deep principle, says DVG.