ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ಮೊದಲನೆಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 2
ಜೀವ ಜಡರೂಪ ಪ್ರಪಂಚವನದಾವುದೋ ।
ಆವರಿಸಿಕೊಂಡು ಮೊಳನೆರೆದುಮಿಹುದಂತೆ ।।
ಭಾವಕೊಳಪಡದಂತೆ ಅಳತೆಗಳವಡದಂತೆ ।
ಆ ವಿಶೇಷಕೆ ಮಣಿಯೋ ಮಂಕುತಿಮ್ಮ
ಮಂಕುತಿಮ್ಮನ ಕಗ್ಗ ಪದ್ಯ- 2 ರಅರ್ಥ
ಈ ಜೀವ ತುಂಬಿದ ಚೇತನವಿಲ್ಲದ ಜಡ ಪ್ರಪಂಚವನ್ನು ಯಾವುದೋ ಒಂದು ಶಕ್ತಿ ಆವರಿಸಿಕೊಂಡು, ಒಳಗೆ ತುಂಬಿಕೊಂಡು ಇರುವಂತೆ,ಭಾವಕ್ಕೆ ಒಳಪಡದಂತೆ ಇರುವದೋ ಆ ವಿಶೇಷಕ್ಕೆ ವಿಶೇಷಕ್ಕೆ ನಮಿಸು.
ಇದರ ಅರ್ಥ ದೇವರು ಎಲ್ಲೆಲ್ಲೂ ಇದ್ದಾನೆ... ಜಡ ವಸ್ತುಗಳಲ್ಲಿ , ಚೇತನರಲ್ಲಿ ಎಲ್ಲರಲ್ಲೂ. ಆದರೂ ಯಾವ ಭಾವ, ಅಭಿಮಾನಕ್ಕೆ ಒಳಪಡದೇ ತನ್ನ ಸಾಮರ್ಥ್ಯದಿಂದ ಜಗದ ವ್ಯಾಪಾರ ನಿರ್ವಹಿಸುತ್ತಾನೆ. ಅಂತಹ ದೇವರಿಗೆ ನಮಸ್ಕಾರ ಎಂದು ಡಿ.ವಿ.ಜಿ. ಹೇಳುತ್ತಾರೆ.
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen First verse.
Mankutimmana Kagga Verse -2 In English
Jīva jaḍarūpa prapan̄cavanadāvudō।
āvarisikoṇḍu moḷaneredumihudante।।
bhāvakoḷapaḍadante aḷategaḷavaḍadante।
ā viśēṣake maṇiyō maṅkutim'ma
Mankutimmana Kagga Verse -2 Meaning In English
Bow down to this special, uncaring, unconscious world that is filled with something powerful, filled with life.
This means that God is everywhere ... in inert things, in all of the spirits.
However, he manages the business of the world with his ability without feeling good or bad. DVG called it a prayer to such a god.