ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ಹದಿನೇಳನೆಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 18
ನದಿಯ ತೆರೆಯವೊಲುರುಳಿ ಹೊರಳುತಿರುವುದು ಜೀವ |
ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲ ವದಕೆ ||
ಬದುಕೇನು ಸಾವೇನು ಸೊದೆಯೇನು ವಿಷವೇನು ? |
ಉದಕಬುದ್ಬುದವೆಲ್ಲ ! - ಮಂಕುತಿಮ್ಮ ||
ಮಂಕುತಿಮ್ಮನ ಕಗ್ಗ ಪದ್ಯ- 18 ರಅರ್ಥ
ಈ ಜಗತ್ತಿನಲ್ಲಿರುವ ಜೀವಿಗಳು ನದಿಯ ತೆರೆಗಳ ಹಾಗೆ ಉರುಳಿ ಹೊರಳಾಡುತ್ತಿವೆ.
ಅದರಂತೆಯೇ ಇದಕ್ಕೂ ಸಹ ಮೊದಲಿಲ್ಲ,ಕೊನೆಯಿಲ್ಲ ಮತ್ತು ನಿಲುವಿಲ್ಲ.
ಹಾಗೇನೇ ಜನರ ಬದುಕು, ಸಾವು, ಅಮೃತ ಅಥವಾ ವಿಷ ಇವೆಲ್ಲವೂ ನೀರಮೇಲಿನ ಗುಳ್ಳೆಗಳಂತೆ.
ಶಾಶ್ವತವಲ್ಲ ಅವು..
ಈಗ ಇವೆ, ನಾಳೆ ಇರಲ್ಲ.
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Seventeenth verse.
Mankutimmana Kagga Verse -18 In English
Nadiya tereyavoluruli horalutiruvudu jiva |
modalilla mugivilla niluvilla vadake ||
badukenu savenu sodeyenu vishavenu? |
Udakabudbudavella! - Mankutimma ||
Mankutimmana Kagga Verse -18 Meaning In English
The creatures of this world are rolling like the currents of a river.
It has no beginning, no end and no stance.
Such is the life of the people here - birth, death, immortality or poison.
They are not permanent ..
They are there now, will not be there tomorrow.
See other Verses of Makutimmana Kagga By Clicking Below Links