Blog : Manku Timmana Kagga | Manavaro | Verse 12 | Meaning In Kannada | English
Manku Timmana Kagga | Manavaro | Verse 12 | Meaning In Kannada | English

ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)

ಹನ್ನೊಂದನೇಯ ಪದ್ಯ ಆಗಲೇ ನೋಡಿದ್ದೇವೆ.

 

ಮಂಕುತಿಮ್ಮನ ಕಗ್ಗ ಪದ್ಯ- 12

ಮಾನವರೋ ದಾನವರೋ ಭೂಮಾತೆಯನು ತಣಿಸೆ |
ಶೋಣಿತನವನೆರೆಯುವರು ಬಾಷ್ಪ ಸಲುವುದಿರೆ ? ||
ಏನು ಹಗೆ ! ಏನು ಧಗೆ ! ಏನು ಹೊಗೆ ! ಯೀ ಧರಣಿ !
ಸೌನಿಕನ ಕಟ್ಟೆಯೇಂ - ಮಂಕುತಿಮ್ಮ||

 

ಮಂಕುತಿಮ್ಮನ ಕಗ್ಗ ಪದ್ಯ- 12 ರಅರ್ಥ

ಇವರೇನು ಮನುಷ್ಯರೋ ಅಥವಾ ರಾಕ್ಷಸರೋ. ಈ ಭೂಮಿತಾಯಿಯನ್ನು ತೃಪ್ತಿ ಪಡಿಸಲು ಕಣ್ಣೀರು ಸುರಿಸುವದರ ಬದಲು ರಕ್ತವನ್ನು ಸುರಿಸುತ್ತಿದ್ದಾರೆ. ಈ ಜಗತ್ತಿನಲ್ಲಿರುವ ಹಗೆತನ, ಸುಟ್ಟು ಬಂದ ಹೊಗೆ ನೋಡಿದರೆ, ಇದು ಕಟುಕನು ಪಶುಗಳನ್ನು ಕತ್ತಿರಿಸಲು ಉಪಯೋಗಿಸುವ ಕಟ್ಟೆಯಂತೆ ಕಾಣುತ್ತಿದೆ.

-----------------------------------------------------------------------

Manku Timmana Kagga In Englilsh

Written By : Shri D.V.Gundappa (DVG)

 

We have already seen Eleventh verse. 

 

Mankutimmana Kagga Verse -12 In English

Manavaro danavaro bhoomateyanu taṇise |
shonitanavanereyuvaru bashpa saluvudire? ||
Enu hage! Enu dhage! Enu hoge! Yi dharani! |
Saunikana katteyEm - Mankutimma ||

 

Mankutimmana Kagga Verse -12 MeaninIn English

Are these men or a demons. Instead of tears to satisfy the earth, blood is being shed . The hostility in this world, when it comes to burning smoke, is seen as a bundle used by a butcher to slaughter cattle.