Blog : Manku Timmana Kagga | Haleya Bhakti Shraddhe | Verse 15 | Meaning In Kannada | English
Manku Timmana Kagga | Haleya Bhakti Shraddhe | Verse 15 | Meaning In Kannada | English

ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)

ಹದಿನಾಲ್ಕನೇಯ ಪದ್ಯ ಆಗಲೇ ನೋಡಿದ್ದೇವೆ.

 

ಮಂಕುತಿಮ್ಮನ ಕಗ್ಗ ಪದ್ಯ- 15

ಹಳೆಯ ಭಕ್ತಿಶ್ರದ್ಧೆಯಳಿಸಿಹೋಗಿವೆ ಮಾಸಿ |
ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ ||
ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ |
ತಳಮಳಿಸುತಿದೆ ಲೋಕ - ಮಂಕುತಿಮ್ಮ ||

 

ಮಂಕುತಿಮ್ಮನ ಕಗ್ಗ ಪದ್ಯ- 15 ರಅರ್ಥ

ಹಿಂದಿನ ಕಾಲದಲ್ಲಿದ್ದ ಭಕ್ತಿ, ಶ್ರದ್ಧೆಗಳು ಈಗ ಇಲ್ಲ.
ಕಾಲ ಬದಲಾಗುತಿದ್ದರೂ ಹಳೆಯ ನಂಬಿಕೆಗಳು, ಅವುಗಳ ಬಲಗಳನ್ನು ಕಳೆದುಕೊಳ್ಳುತ್ತಿದ್ದರೂ , ಹೊಸ ನಂಬಿಕೆಗಳೇನೂ ಹುಟ್ಟುತ್ತಿಲ್ಲ.

ಇದರ ಪರಿಣಾಮ ಬಹುಕಾಲ ಓಡಾಡಿಕೊಂಡು ಅಭ್ಯಾಸವಾಗಿದ್ದ ಮನೆಯಲ್ಲಿ ಇರುವ ಕುಂಟನೋ ಅಥವಾ ಕುರುಡನಿಗೋ ಆ ಮನೆ ಬಿದ್ದು ಹೋದರೆ ಓಡಾಡುವದು ಕಷ್ಟವಾಗುವಂತೆ ಜನಗಳಿಗೆ ಹಿಂದಿನ ನಂಬಿಕೆ ಹೋಗಿ, ಹೊಸದು ಯಾವುದೂ ಇಲ್ಲದಿರುವದರಿಂದ ಜಗತ್ತು ಒಂದು ವಿಧವಾದ ಚಿಂತೆ ಮತ್ತೆ ಗಾಬರಿಗಳಿಗೆ ಸಿಕ್ಕಿಹಾಕಿಕೊಂಡಿವೆ. 

-----------------------------------------------------------------------

Manku Timmana Kagga In Englilsh

Written By : Shri D.V.Gundappa (DVG)

 

We have already seen Fourteenth verse. 

 

Mankutimmana Kagga Verse -15 In English

Haleya bhaktishraddheyalisihogive masi |
sulidillavava hosa darshanada holapum ||
palagidda mane bidda kunta kurudana teradi |
talamalisutide loka - Mankutimma ||

 

Mankutimmana Kagga Verse -15 MeaninIn English

The devotion and dedication of the past is no more.

Old beliefs, though changing over time, lose their strength, and no new beliefs are born.

As a result, people who have been in the habit of running for long periods of time in the same house, lame or the blind, will find it difficult to move if the house falls down.

In the same way, the world is once again worried by the fact that there is nothing new.