ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ನಾಲ್ಕನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 5
ದೇವರೆಂಬುದೇನು ಕಗ್ಗತ್ತಲೆಯ ಗವಿಯೆ ? ।
ನಾವರಿಯಲಾರದೆಲ್ಲ ದರೊಟ್ಟು ಹೆಸರೇ ? ।।
ಕಾವನೊರ್ವನಿರಲ್ಕೆ ಜಗದ ಕಥೆಯೇಕಿಂತು ।।
ಸಾವು ಹುಟ್ಟುಗಳೇನು ? - ಮಂಕುತಿಮ್ಮ
ಮಂಕುತಿಮ್ಮನ ಕಗ್ಗ ಪದ್ಯ- 5 ರಅರ್ಥ
ದೇವರು ಎನ್ನುವುದು ಏನು ? ಒಂದು ಕಗ್ಗತ್ತಲೆಯಿಂದ ಕೂಡಿದ ಗುಹೆಯೋ? ಅಥವಾ ನಮಗೆ ತಿಳಿಯದೆ ಇರುವ ಎಲ್ಲವನ್ನು ಕೂಡಿ , ಅದಕ್ಕೆ ನಾವು ಒಂದು ಹೆಸರಿಟ್ಟು , 'ದೇವರು' ಎಂದು ಕರೆಯುತ್ತಿದ್ದೇವೆಯೋ?
ಈ ಜಗತ್ತನ್ನು ಕಾಪಾಡುವನೊಬ್ಬನಿದ್ದರೂ ಈ ಜಗತ್ತಿಗೆ ಕಥೆ ಹೀಗೇಕಿದೆ ?
ಈ ಹುಟ್ಟು ಮತ್ತು ಸಾವುಗಳ ಅರ್ಥವೇನು ? ಈ ರೀತಿಯ ಪ್ರಶ್ನೆಗಳು ಪ್ರತಿಯೊಬ್ಬ ಮನುಷ್ಯನನ್ನು ಒಂದಲ್ಲ ಒಂದು ಸಲ ಕಾಡಿರುವ ವಿಷಯಗಳೇ !
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Fourth verse.
Mankutimmana Kagga Verse -5 In English
Devarembudenu kaggattaleya gaviye? ।
Naavariyalaradella darottu hesare ? ।।
Kaavanorvaniralke jagada katheyekintu।।
saavu huttugalenu? - Mankutimma
Mankutimmana Kagga Verse -5 Meaning In English
What is God? Is it a dungen dark cave? Or do we call it 'God' by gathering all that we do not know?
What is the state to this world, even if it has one savior of the world?
What is the meaning of these births and deaths? Questions like these are things that haunt every man, at least once!