ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ಇಪ್ಪತ್ತೈದನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 26
ಸೃಷ್ಟಿಯಾಶಯವದೇನಸ್ಪಷ್ಟ ಸಂಶ್ಲಿಷ್ಟ |
ಇಷ್ಟ ಮೋಹಕ ದಿವ್ಯಗುಣಗಳೊಂದು ಕಡೆ ||
ಕಷ್ಟ ಭೀಭತ್ಸ ಘೋರಂಗಳಿನ್ನೊಂದು ಕಡೆ |
ಕ್ಲಿಷ್ಟವೀ ಬ್ರಹ್ಮ ಕೃತಿ - ಮಂಕುತಿಮ್ಮ ||
ಮಂಕುತಿಮ್ಮನ ಕಗ್ಗ ಪದ್ಯ- 26 ರ ಅರ್ಥ
ಏನು ಸೃಷ್ಟಿಯ ಉದ್ದೇಶ? ಸ್ಪಷ್ಟವಿಲ್ಲ. ಸರಿಯಾಗಿ ತಿಳಿಯಲಾಗುವದಿಲ್ಲ. ಜೊತೆಗೆ ಬಹಳ ತೊಡಕು.
ಒಂದು ಕಡೆ ಪ್ರೀತಿಪಾತ್ರವಾಗುವ ಸ್ವಭಾವಗಳು. ಮರಳುಗೊಳಿಸುವವು. ಸುಂದರ ಸ್ವಭಾವಗಳು.
ಮತ್ತೊಂದು ಕಡೆ ಕಠಿಣ, ಅಸಹ್ಯವಾಗಿರುವ ಭಯಂಕರಗಳು.
ಇದು ಬ್ರಹ್ಮದೇವರ ಸೃಷ್ಟಿ. ಅರ್ಥಮಾಡಿಕೊಳ್ಳಲು ಬಹಳ ಕಷ್ಟ.
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Twenty Fifth verse.
Mankutimmana Kagga Verse -26 In English
Srushtiyasayavadenaspashtaa sanklishta |
ishta mohaka divyagunagalondu kade ||
kashta bhibhatsa ghorangalinnondu kade |
klishtavi brahma kruti - Mankutimma ||
Mankutimmana Kagga Verse -26 Meaning In English
What is the purpose of this creation? Not clear. Not be properly understood. Also too complicated.
On the one hand, lovables.Beautiful natured people around.
On the other hand are the harsh, nasty horrors.
That is the creation of Lord Brahma. Very difficult to understand.
See other Verses of Makutimmana Kagga By Clicking Below Links