ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ಇಪ್ಪತ್ನಾಲ್ಕನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 25
ಜೀವಗತಿಗೊಂದು ರೇಖಾಲೇಖವಿರಬೇಕು |
ನಾವಿಕನಿಗಿರುವಂತೆ ದಿಕ್ಕು ದಿನವೆಣಿಸೆ ||
ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ ? |
ಆವುದೀ ಜಗಕಾದಿ ? - ಮಂಕುತಿಮ್ಮ ||
ಮಂಕುತಿಮ್ಮನ ಕಗ್ಗ ಪದ್ಯ- 25 ರ ಅರ್ಥ
ಹಡಗು ನಡೆಸುವ ನಾವಿಕ. ಅವನಿಗಿದೆ ದಿಕ್ಸೂಚಿ ಇದೆ. ದಿಕ್ಕು, ದಿನ ತಿಳಿಸಲು.
ಹಾಗೇ ಈ ಜೀವನ ನಡೆಸಲು ಬೇಕು ದಿಕ್ಸೂಚಿ. ಸರಿಯಾದ ದಾರಿ ಇರಬೇಕು.
ಈ ದಾರಿಗೆ ಮೊದಲು ಕೊನೆಯೇ ಕಾಣಿಸುವದಿಲ್ಲ. ಹೇಗೆ ಊಹಿಸುವದು? ಮುಂದುವರೆಯುವದು ಹೇಗೆ?
ಈ ಜಗತ್ತಿಗೆ ಮೊದಲು ಯಾವುದು?
ಯಾರಿಗಾದರೂ ತಿಳಿದಿದೆಯೇ?
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Twenty Fourth verse.
Mankutimmana Kagga Verse -25 In English
Jivagatigondu rekhalekhavirabeku |
navikanigiruvante dikku dinavenise ||
bhavisuvudentadanu modalu kone toradire? ||
avudi jagakadi? - Mankutimma |
Mankutimmana Kagga Verse -25 Meaning In English
Sailor steers a ship. He has a compass. That informs him of the direction and date.
A compass is needed to live this life. We need to move ahead. There must be a right way for it.
This path has no beginning or end in sight.
How to guess the way ? How to proceed?
What is the beginning of this world?
Does anyone know?
See other Verses of Makutimmana Kagga By Clicking Below Links