Blog : Manku Timmana Kagga | Narara | Verse 24 | Meaning In Kannada | English
Manku Timmana Kagga | Narara | Verse 24 | Meaning In Kannada | English

ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)

ಇಪ್ಪತ್ತಮೂರನೇಯ ಪದ್ಯ ಆಗಲೇ ನೋಡಿದ್ದೇವೆ.

 

ಮಂಕುತಿಮ್ಮನ ಕಗ್ಗ ಪದ್ಯ- 24

ನರರ ಭಯಬಯಕೆಗಳೆ ಸುರರ ತಾಯ್ತಂದೆಗಳೋ ? |
ಸುರರಟ್ಟಹಾಸದಿನೆ ನರಭಕ್ತಿಯೊರಲೊ ? ||
ಪರಿಕಿಸುವರೇನವರ್ಗಳನ್ಯೋನ್ಯಶಕ್ತಿಗಳ ? |
ಧರುಮವೆಲ್ಲಿದರಲ್ಲಿ ? - ಮಂಕುತಿಮ್ಮ ||

 

ಮಂಕುತಿಮ್ಮನ ಕಗ್ಗ ಪದ್ಯ- 24 ರಅರ್ಥ

ಮನುಷ್ಯರಲ್ಲಿವೆ ಭಯ ಮತ್ತು ಆಸೆಗಳು. ಇವು ದೇವತೆಗಳ ತಂದೆ-ತಾಯಿಗಳೋ?

ಮಾನವರು ದೀನರು. ದೇವತೆಗಳ ಜಂಬದಿಂದ ಕೂಡಿದ ನಗು. ಅದನ್ನ ನೋಡಿ ಮಾನವರು ಭಕ್ತಿಯಿಂದ ದೇವತೆಗಳನ್ನು ಬೇಡುತ್ತಾರೆಯೇ?

ಇದೇನು ಬಲಾಬಲ ಪರೀಕ್ಷೆಯೇ? ಮಾನವರ ಪರೀಕ್ಷೆ ದೇವತೆಗಳಿಂದಲೋ? ದೇವತೆಗಳ ಪರೀಕ್ಷೆ ದೇವತೆಗಳಿಂದಲೋ?

ಇದು ನಿಜವಾದರೆ ಇಲ್ಲಿ ಧರ್ಮವೆಲ್ಲಿ ಬಂತು?

 

-----------------------------------------------------------------------

Manku Timmana Kagga In Englilsh

Written By : Shri D.V.Gundappa (DVG)

 

We have already seen Twenty Third verse. 

 

Mankutimmana Kagga Verse -24 In English

Narara bhayabayakegale surara taytandegalo? |
Surarattahasadine narabhaktiyoralo? ||
Parikisuvarenavargalanyonyashaktigala? |
Dharumavellidaralli? - Mankutimma |

 

 

Mankutimmana Kagga Verse -24 MeaninIn English

Humans have fears and desires. Are these two the parents of the gods?

Human beings are weak. The gods have proud smile. Seeing that proud smile, do humans plead them out of devotion?

Is this a test of strengths? Is this test of humans by the gods? Is this the test of the gods by the human beings?

If this is true, where is dharma here?

 

See other Verses of Makutimmana Kagga By Clicking Below Links

Verse 1 (ಪದ್ಯ 1) Verse 2 (ಪದ್ಯ 2) Verse 3 (ಪದ್ಯ 3) Verse 4 (ಪದ್ಯ 4) Verse 5 (ಪದ್ಯ 5) Verse 6 (ಪದ್ಯ 6)
Verse 7 (ಪದ್ಯ 7) Verse 8 (ಪದ್ಯ 8) Verse 9 (ಪದ್ಯ 9) Verse 10 (ಪದ್ಯ 10) Verse 11 (ಪದ್ಯ 11) Verse 12 (ಪದ್ಯ 12)
Verse 13 (ಪದ್ಯ 13) Verse 14 (ಪದ್ಯ 14) Verse 15 (ಪದ್ಯ 15) Verse 16 (ಪದ್ಯ 16)  Verse 17 (ಪದ್ಯ 17)  Verse 18 (ಪದ್ಯ 18)
Verse 19 (ಪದ್ಯ 19)  Verse 20 (ಪದ್ಯ 20)  Verse 21 (ಪದ್ಯ 21) Verse 22 (ಪದ್ಯ 22)  Verse 23 (ಪದ್ಯ 23)