ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ಇಪ್ಪತ್ತನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 21
ಹೊನ್ನೆಂದು ಜಗದಿ ನೀಂ ಕೈಗೆ ಕೊಂಡುದನು ವಿಧಿ-
ಮಣ್ಣೆ ನುವನ್ ; ಅವನ ವರ ಮಣ್ಣೆನುವೆ ನೀನು ||
ಭಿನ್ನಮಿಂತಿರೆ ವಸ್ತು ಮೌಲ್ಯಗಳ ಗಣನೆಯೀ |
ಪುಣ್ಣ್ಯಕ್ಕೆ ಗತಿಯೆಂತೋ - ಮಂಕುತಿಮ್ಮ ||
ಮಂಕುತಿಮ್ಮನ ಕಗ್ಗ ಪದ್ಯ- 21 ರಅರ್ಥ
'ತಾನೊಂದು ಬಗೆದರೆ ದೈವವೊಂದು ಬಗೆಯಿತು' ಅಂತ ಗಾದೆ ಇದೆ.
ನಾವು ಏನೇನೊ ಭಾವಿಸುತ್ತೇವೆ, ಆಶಿಸುತ್ತೇವೆ. ಆದರೆ ಆಗುವದೇ ಬೇರೆ.
ಇದು ನಿಮಗೆ ಅನುಭವವಾಗಿರಬಹುದು.
ಒಂದು ವಸ್ತುವನ್ನು ಚಿನ್ನವೆಂದು ಭಾವಿಸುತ್ತೇವೆ. ಅದು ಮಣ್ಣಾಗಿಬಿಡುತ್ತದೆ. ಏನು ಬೆಲೆ ಇರುವದಿಲ್ಲ.
ಆದರೆ, ದೇವರು ನಮಗೆ ಕೊಟ್ಟ ವರ ಚಿನ್ನ. ಅದು ನಮಗೆ ಮಣ್ಣಿನಂತೆ ಭಾಸವಾಗುತ್ತದೆ. ಇದಲ್ಲವೇ ವಿಪರ್ಯಾಸ?
ವಸ್ತುಗಳ ಮೌಲ್ಯ ವ್ಯತ್ಯಾಸವಾಗುತ್ತಿರುವ ಈ ವ್ಯಾಪಾರದ ಗತಿ ಏನು?
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Twentieth verse.
Mankutimmana Kagga Verse -21 In English
Honnendu jagadi nim kaige kondudanu vidhi-
manne nuvan; avana vara mannenuve ninu ||
bhinnamintire vastu maulyagala gananeyi |
punnyakke gatiyento - Mankutimma ||
Mankutimmana Kagga Verse -21 Meaning In English
There is proverb in Kannada - 'Tanondu Bagedare daivavondu bageyitu'.
This means, a person wishes something to happen according to his will. But in reality, things will happen according to god's will.
This might be your experience too.
We think that something is gold (precious). But it will turn out to be mud, having no value, at all.
But, god's gift to us is golden, very precious. We think that he has given us mud, nothing valuable. Is it not the irony?
What is the fate of this business in which the value of things varies?
See other Verses of Makutimmana Kagga By Clicking Below Links