ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ಮೂವತ್ಮೂರನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 34
ಎಷ್ಟು ಚಿಂತಿಸಿದೊಡಂ ಶಂಕೆಯನೆ ಬೆಳೆಸುವೀ |
ಸೃಷ್ಟಿಯಲಿ ತತ್ವವೆಲ್ಲಿಯೋ ಬೆದಕಿ ನರನು ||
ಕಷ್ಟಪಡುತಿರಲೆನುವದೇ ಬ್ರಹ್ಮವಿಧಿಯೇನೋ ! |
ಅಷ್ಟೆ ನಮ್ಮಯ ಪಾಡು? - ಮಂಕುತಿಮ್ಮ||
ಮಂಕುತಿಮ್ಮನ ಕಗ್ಗ ಪದ್ಯ- 34 ರ ಅರ್ಥ
ಜಗ ಬ್ರಹ್ಮನ ಸೃಷ್ಟಿ. ಅದು ವಿಸ್ಮಯ. ಚಿತ್ರ-ವಿಚಿತ್ರ. ಆಳ, ಅಗಲ, ಎತ್ತರ. ಬಹಳ ವಿಸ್ತಾರ. ನಮ್ಮ ಯೋಚನೆಗೆ ಸಿಲುಕದು.
ಸೃಷ್ಟಿಯ ಬಗೆಗೆ ವಿಚಾರ.ಮಾಡಿದಷ್ಟು ಸಂದೇಹ. ಅಳುಕು, ಭಯ. ಇವು ಹೆಚ್ಚುತ್ತಲೇ ಹೋಗುತ್ತವೆ.
ಸಿದ್ಧಾಂತ ಯಾವುದು ಸೃಷ್ಟಿಗೆ ? ಅದು ಇದೆಯಾ? ಇದ್ದರೆ ಸಿದ್ಧಾಂತದ ಹುಡುಕಾಟ. ಹುಡುಕುತ್ತ ಹೋದಾಗ ಒಂದು ಅನಿಸಿಕೆ ಬರಬಹುದು. .
ನಾವು ಕಷ್ಟ ಪಡುತ್ತಲೇ ಇರಬೇಕೆ? ಎಂದಿಗೂ? ಇದೇ ವಿಧಿ ಬರಹವೇ?
ಅಂದರೆ- ಸೃಷ್ಟಿಗೆ ಯಾವುದೇ ಸಿದ್ಧಾಂತ ಇಲ್ಲ. ಮಾನವರಿಗೆ ಕಷ್ಟ. ಇದೆ ವಿಧಿಯ ಬರಹ. ಇಷ್ಟೇ ನಮ್ಮ ಅವಸ್ಥೆ. ಅದೇ ಅನಿಸಿಕೆ.
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Thirty Third verse.
Mankutimmana Kagga Verse -34 In English
Eshtu chintisidodam shankeyane belesuvi |
srushtiyali tatvavelliyo bedaki naranu ||
kashtapadutiralenuvade brahmavidhiyeno! |
Ashte nammaya padu? - Mankutimma ||
Mankutimmana Kagga Verse -34 Meaning In English
The world is the creation of Brahma. That's amazing. Strange. Creation is deep,very vast, huge.Very extensive. This thought of creation is difficult to even think about.
Thought on creation. The more we think about creation, the more confusion, sorrow, fear. And that keeps increasing.
What is the theory of creation? Does the theory really exist? We search for that underlying theory which is the basis for Brahma’s creation.
When we keep on searching for this,we feel that :”Should we continue to struggle? Is this the fate?”
That is- there is no theory of creation. Humans have problems. It is fate. This is our plight.
See other Verses of Makutimmana Kagga By Clicking Below Links