ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ಇಪ್ಪತ್ತಾರನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 27
ಧರೆಯ ಬದುಕೇನದರ ಗುರಿಯೇನು ಫಲವೇನು ? |
ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ ||
ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ |
ನರನು ಸಾಧಿಪುದೇನು ? - ಮಂಕುತಿಮ್ಮ||
ಮಂಕುತಿಮ್ಮನ ಕಗ್ಗ ಪದ್ಯ- 27 ರ ಅರ್ಥ
ಈ ಜಗತ್ತಿನ ಬದುಕಿನ ಉದ್ದೇಶವೇನು? ಪ್ರಯೋಜನಗಳೇನು?
ವ್ಯರ್ಥ ಓಡಾಟ, ತಿಕ್ಕಾಟ, ತೊಳಲಾಟವೇ? ಅಷ್ಟೇನೆ?
ಪ್ರಾಣಿಗಳು ಪಕ್ಷಿಗಳು ತಿರುಗಾಡುತ್ತವೆ. ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಅವುಗಳ ಕೆಲಸ ಅಷ್ಟೇ.
ಅಂತಹ ಪಶು ಪಕ್ಷಿಗಳಿಗಿಂತ ಮಾನವ ಉತ್ತಮ.
ಆದರೆ ಅವನು/ಅವಳು ಹೆಚ್ಚಿನದದ್ದೇನಾದರೂ ಸಾಧನೆ ಮಾಡಿದ್ದಾನೆಯೇ?
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Twentysixth verse.
Mankutimmana Kagga Verse -27 In English
Dhareya badukenadara guriyenu phalavenu? |
Bari balasu badidata bari paribhramane ||
tirutirugi hotte horakoluva mrugakhagakinta |
naranu sadhipudenu? - Mankutimma ||
Mankutimmana Kagga Verse -27 Meaning In English
What is the purpose of life in this world? What are the benefits?
Is it useless work like running, bickering, struggling? That is it?
Animals and birds roam around. Fill their stomachs. That's their job.
Human beings are superior to such animals & birds.
But has he/she achieved anything more than those animals?
See other Verses of Makutimmana Kagga By Clicking Below Links