ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ನಲವತ್ತಒಂದನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 42
ಆಹ | ಈ ಮೋಹಗಳೋ ನೇಹಗಳೋ ದಾಹಗಳೋ |
ಊಹಿಪೆಯ ಸೃಷ್ಟಿಯಲಿ ಹೃದಯಮಿಹುದೆಂದು? ||
ಹೋಹೊ ಹಾಹಾ ಎಂದು ನಮ್ಮ ಬಾಯ್ಬಿಡಿಸಿವದೆ |
ಈ ಹರಿಬದೊಳಗುಟ್ಟೊ ? - ಮಂಕುತಿಮ್ಮ ||
ಮಂಕುತಿಮ್ಮನ ಕಗ್ಗ ಪದ್ಯ- 42 ರ ಅರ್ಥ
ಈ ಜಗತ್ತಿನಲ್ಲಿರುವವರೆಲ್ಲರೂ ಹೃದಯವಂತರು. ಎಂದು ನಮ್ಮ ಭಾವನೆ !
ನಾವು ಮುಳುಗಿಹೋಗಿದ್ದೇವೆ - ಮೋಹದಲ್ಲಿ. ಸ್ನೇಹದಲ್ಲಿ. ದಾಹಗಳಲ್ಲಿ(ಇನ್ನು ಬೇಕು ಇನ್ನು ಬೇಕು ಎನ್ನುವ ಭಾವನೆ).
ಅದರಿಂದ ನಮಗೆ ಹೃದಯವಂತಿಕೆಯ (ದೊಡ್ಡತನ) ಕಾಣಲು ಕಾತರ.
ಆದರೆ ಅದು ಎಲ್ಲೂ ಕಾಣಿಸುತ್ತಿಲ್ಲ.
'ಹೃದಯವಂತಿಕೆ' ಒಂದು ವ್ಯವಹಾರ. ಅಷ್ಟೇ.
ಬರೀ 'ಹಾಹಾ ಹೋಹೋ' ಎಂದು ನಮ್ಮ ಬಾಯಿ ಬಡಿಸುವದು. ಇದು ಈ ವ್ಯವಹಾರದ ಗುಟ್ಟೇ ?.
ಅಂದರೆ ಹೃದಯವಂತಿಕೆ' ನೋಡಿ ಆಶ್ಚರ್ಯ ಪಡುವದು ಅಷ್ಟೇ ನಾ ?. ನೋಡಲು ಮಾತ್ರ ಅಂದನಾ ?.
ತಾತ್ಪರ್ಯ :
ಎಲ್ಲೆಲ್ಲೂ ವ್ಯಾಪಾರೀ ಭಾವನೆ. ಕೊಡು-ತೆಗೆದುಕೊಳ್ಳುವ ಬಿಸಿನೆಸ್.
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Forty-First verse.
Mankutimmana Kagga Verse -42 In English
Aaha| ee mohagalo nehagalo daahagalo |
oohipeya srushtiyali hrudayamihudendu? ||
Hoho haahaa endu namma baaybidisivade |
ee haribadolagutto ? - Mankutimma ||
Mankutimmana Kagga Verse -42 Meaning In English
Everyone in this world has a heart. That's our feeling!
We are overwhelmed - in love. in friendship. In thirst (feeling of wanting more).
We are eager to see heartiness (greatness) from it.
But it is nowhere to be seen.
Greatness is a business. That's it ?
Our mouth just says 'haha hoho'. Is this the secret of this business?
I mean, I am surprised to see 'Hridayavantike'? Is it just for show off ?
Gist:
A sense of business everywhere. A give-and-take business.
Want to improve yourself, see other Verses of Makutimmana Kagga By Clicking Below Links