Blog : Manku Timmana Kagga | Verse 39 | Pusiya | Meaning In Kannada | English
Manku Timmana Kagga | Verse 39 | Pusiya | Meaning In Kannada | English

ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)

ಮೂವತ್ತೆಂಟನೇಯ ಪದ್ಯ ಆಗಲೇ ನೋಡಿದ್ದೇವೆ.

 

ಮಂಕುತಿಮ್ಮನ ಕಗ್ಗ ಪದ್ಯ- 39

ಪುಸಿಯ ನೀಂ ಪುಸಿಗೈದು ದಿಟವ ಕಾಂಬವೊಲೆಸಗೆ |
ಮುಸಕ ತಳೆದಿಹನು ಪರಬೊಮ್ಮನೆನ್ನುವೊಡೆ ||
ಒಸದೇತಕವನೀಯನೆಮಗೊಂದು ನಿಜಕುರುಹ |
ನಿಶೆಯೊಳುಡಕರದವೊಲು ? - ಮಂಕುತಿಮ್ಮ ||

 

ಮಂಕುತಿಮ್ಮನ ಕಗ್ಗ ಪದ್ಯ- 39 ರ ಅರ್ಥ

ಸುಳ್ಳನ್ನು ನೀನು ಸುಳ್ಳೆಂದು ತಿಳಿದುಕೊಂಡು, ನಿಜವನ್ನು ಹುಡುಕುತ್ತಿರುವೆ. ನಿನಗೆ ಒಬ್ಬ ಸಹಾಯಕ ಬೇಕು.
ಪರಮಾತ್ಮನು ಮುಸುಕು ಹಾಕಿಕೊಂಡಿಹನು. ಅಂದರೆ ನಮಗೆ ಕಾಣುವದಿಲ್ಲ.
ಕಾಣದಿದ್ದರೂ ಅವನು ಪ್ರಸನ್ನನಾದರೆ, ನಮಗೆ ಅವನು ನಮಗೆ ಸಹಾಯ ಮಾಡುವನು.
ಅದು ಹೇಗೆ ಸಹಾಯ ಮಾಡುತ್ತಾನೆ ? ಅಂದರೆ, ಕತ್ತಲಲ್ಲಿ ನಕ್ಷತ್ರಗಳು ನಮಗೆ ದಾರಿ ತೋರುವಂತೆ.

ಹೀಗೆ ನಮಗೆ ಸಹಾಯ ಮಾಡುವ ಪರಮಾತ್ಮ. ಮಾಡಿದರೆ ಅವನು ನಿಜವಾಗಿಯೂ ಇದ್ದಾನೆ ಎನ್ನುವದು ನಿಜಯಾಗುತ್ತದೆ. ಇಲ್ಲ ಕೊನೇ ಪಕ್ಷ ಅವನು ಇರುವ ಸಣ್ಣ ಕುರುಹು ಆದರೂ ನಮಗೆ ದೊರೆಯುತ್ತದೆ.

-----------------------------------------------------------------------

Manku Timmana Kagga In Englilsh

Written By : Shri D.V.Gundappa (DVG)

 

We have already seen Thirty Eighth verse. 

 

Mankutimmana Kagga Verse -39 In English

Pusiya nim pusigaidu ditava kaambavolesage |
musaka taledihanu parabommanennuvode ||
osadetakavaniyanemagondu nijakuruha |
nisheyoludakaradavolu ? - Mankutimma ||

 

Mankutimmana Kagga Verse -39 MeaninIn English

Knowing a lie to be a lie, you seek the truth. You need someone to guide you.
The Lord has veiled Himself. That means we can't see him.
If he is not seen but is he is pleased, he will help us.
How does he help? He helps, as the stars guide us in the dark.

Thus the Lord helps us. If he does, then it is truth that he really exists. If not, at least we get a small trace of his presence.

 

See other Verses of Makutimmana Kagga By Clicking Below Links

Verse 1 (ಪದ್ಯ 1) Verse 2 (ಪದ್ಯ 2) Verse 3 (ಪದ್ಯ 3) Verse 4 (ಪದ್ಯ 4) Verse 5 (ಪದ್ಯ 5) Verse 6 (ಪದ್ಯ 6)
Verse 7 (ಪದ್ಯ 7) Verse 8 (ಪದ್ಯ 8) Verse 9 (ಪದ್ಯ 9) Verse 10 (ಪದ್ಯ 10) Verse 11 (ಪದ್ಯ 11) Verse 12 (ಪದ್ಯ 12)
Verse 13 (ಪದ್ಯ 13) Verse 14 (ಪದ್ಯ 14) Verse 15 (ಪದ್ಯ 15) Verse 16 (ಪದ್ಯ 16)  Verse 17 (ಪದ್ಯ 17)  Verse 18 (ಪದ್ಯ 18)
Verse 19 (ಪದ್ಯ 19)  Verse 20 (ಪದ್ಯ 20)  Verse 21 (ಪದ್ಯ 21) Verse 22 (ಪದ್ಯ 22)  Verse 23 (ಪದ್ಯ 23)  Verse 24 (ಪದ್ಯ 24)
Verse 25 (ಪದ್ಯ 25)  Verse 26 (ಪದ್ಯ 26)   Verse 27 (ಪದ್ಯ 27)  Verse 28 (ಪದ್ಯ 28)  Verse 29 (ಪದ್ಯ 29)  Verse 30 (ಪದ್ಯ 30)
Verse 31 (ಪದ್ಯ 31)  Verse 32 (ಪದ್ಯ 32)  Verse 33 (ಪದ್ಯ 33)  Verse 34 (ಪದ್ಯ 34)  Verse 35 (ಪದ್ಯ 35)  Verse 36 (ಪದ್ಯ 36)
Verse 37 (ಪದ್ಯ 37)  Verse 38 (ಪದ್ಯ 38)