ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ಮೂವತ್ತೊಂಬತ್ತನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 40
ನಿಶೆಯೊಳೆಮ್ ಕಾಣಬಾರನು ಹಗಲನೊಲ್ಲದೊಡೆ ? |
ಶಶಿರವಿಗಳವನ ಮನೆಕಿಟಕಿಯಾಗಿರರೇಂ ? ||
ಮಸುಕುಬೆಳಕೊಂದಾದ ಸಂಜೆಮಂಜೇನವನು |
ಮಿಸುಕಿ ಸುಳಿಯುವ ಸಮಯ - ಮಂಕುತಿಮ್ಮ||
ಮಂಕುತಿಮ್ಮನ ಕಗ್ಗ ಪದ್ಯ- 40 ರ ಅರ್ಥ
ದೇವರು ಹಗಲು ಕಾಣಿಸುವದಿಲ್ಲ. ಇದು ಅವನ ನಿಯಮವೇ?
ಹಾಗಿದ್ದರೆ ಅವನು ರಾತ್ರಿ ಕಾಣಿಸಿಕೊಳ್ಳಬಹುದು. ಅಲ್ಲವೇ?
ಸೂರ್ಯ, ಚಂದ್ರರು ಅವನ ಮನೆಯ ಕಿಟಿಕಿಗಳೇ?
ಸಂಜೆಯ ಸಮಯ ಮಂದ ಬೆಳಕು. ಆಗ ದೇವರು ಬರುತ್ತಾನೋ?
ಮಿಂಚಿನಂತೆ ಬಂದು ಮಾಯವಾಗುತ್ತಾನೋ?
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Thirty Ninth verse.
Mankutimmana Kagga Verse -40 In English
Nisheyolem kaanabaaranu hagalanolladode? |
shashiravigalavana manekiṭakiyaagirarem? ||
Masukubelakondaada sanjemanjenavanu |
misuki suliyuva samaya - Mankutimma ||
Mankutimmana Kagga Verse -40 Meaning In English
God cannot be seen in daylight. Is this his rule?
If so, he may appear at night. isn't it ?
Are the sun and the moon the windows of his house?
Evening time is dim light. Will God come then?
Will he come and disappear like lightning?
See other Verses of Makutimmana Kagga By Clicking Below Links