ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ನಲವತ್ಮೂರನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 44
ಮಂದಾಕ್ಷಿ ನಮಗಿಹುದು, ಬಲುದೂರ ಸಾಗದದು |
ಸಂದೆ ಮಸಕಿನೊಳಿಹುದು ಜೀವನದ ಪಥವು ||
ಒಂದುಮಟುಕದು ಕೈಗೆ ಏನೊ ಕಣ್ಕೆಣಕುವದು |
ಸಂದಿಯವೆ ನಮ್ಮ ಗತಿ ! - ಮಂಕುತಿಮ್ಮ ||
ಮಂಕುತಿಮ್ಮನ ಕಗ್ಗ ಪದ್ಯ- 44 ರ ಅರ್ಥ
ನಮಗೆ ಆ ಪರಮಾತ್ಮ ಕೊಟ್ಟಿರುವ ದೃಷ್ಟಿ ಸ್ವಲ್ಪ ಮಂದ.
ದೂರದಲ್ಲಿ ಇರುವುದನ್ನು ನಾವು ಕಾಣಲಾಗುವುದಿಲ್ಲ.
ಈವತ್ತಿನ ಬಗ್ಗೆ ಸ್ವಲ್ಪ ಮಟ್ಟಿಗೆ ನಿಖರವಾಗಿ ಹೇಳಬಹುದು. ನಾಳಿನ ಬಗ್ಗೆ ಹೇಳಲಾರೆವು.
ಆ ದೃಷ್ಟಿಯನ್ನು ಅವನು ನಮಗೆ ಕೊಟ್ಟಿಲ್ಲ.
ಆದುದ್ದರಿಂದ ನಮ್ಮ ಜೀವನದ ಹಾದಿ ಹೀಗೆಯೇ ಸಾಗುತ್ತದೆಯೆಂದು ಕರಾರುವಾಕ್ಕಾಗಿ ಹೇಳಲು ಆಗುವದಿಲ್ಲ.
ಒಂದು ವಿಧವಾದ ಸಂಜೆಯ ಮಸುಕು. ಅದು ನಮ್ಮ ದೃಷ್ಟಿ ಆವರಿಸಿಕೊಂಡಿದೆ.
ಈ ಹಾದಿ ನಮಗೆ ಮಸಕು ಮಸಕಾಗಿಯೇ ಕಾಣುವಂತೆ ಮಾಡುತ್ತದೆ.
ಬೇಕಾದುದನ್ನು ಪಡೆಯಲು ನಾನಾ ಬಗೆಯ ಪ್ರಯತ್ನಗಳನ್ನು ಮಾಡುತ್ತೇವೆ. ಅವು ಯಾವುವೂ ನಮಗೆ ದೊರಕುವುದಿಲ್ಲ.
ಪ್ರಯತ್ನವನ್ನು ಮಾಡುವಾಗ ಮತ್ಯಾವುದೋ ವಸ್ತು, ಆಶೆ. ನಮ್ಮ ಕಣ್ಣುಗಳನ್ನು ಕೆಣಕುತ್ತದೆ. ಮನಸ್ಸನ್ನು ಎಳೆಯುತ್ತವೆ.
ನಾವು ಪ್ರಯತ್ನ ಪಡುತ್ತಿರುವುದನ್ನು ಬಿಡುತ್ತೇವೆ. ಬೇರೆಯದರ ಹಿಂದೆ ಓಡುತ್ತೇವೆ .
ಈ ಪರಿಸ್ಥಿತಿಯಲ್ಲಿ ನಮ್ಮ ಮನಸ್ಸು ಯಾವಾಗಲೂ ಸಂದಿಗ್ಧ. ಸಂದೇಹದಲ್ಲಿ ಇರುತ್ತದೆ.
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Forty-Third verse.
Mankutimmana Kagga Verse -44 In English
Mandaakshi namagihudu, baludoora saagadadu |
sande masakinolihudu jeevanada pathavu ||
ondumatukadu kaige eno kankenakuvadu |
sandiyave namma gati! - Mankutimma ||
Mankutimmana Kagga Verse -44 Meaning In English
The vision that God has given us is a little dim.
We cannot see what is far away.
We can talk about today somewhat accurately. We cannot talk about tomorrow.
He has not given us that vision.
Therefore, it cannot be said for sure that the path of our life will go like this.
It's a blur like evenings. It covers our vision.
Therefore we can not see the road ahead.
We make various efforts to get what we want. We don't get any of them.
While making an effort, something else comes up… an aspiration. Makes our eyes sting. They pull the mind.
We stop trying. We run after something else.
In this situation our mind is always confused. It will be in doubt.
Want to improve yourself, see other Verses of Makutimmana Kagga By Clicking Below Links