ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ನಲವತ್ತೆರಡನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 43
ಮೇಲೆ ಕೆಳಗೊಳಗೆ ಬಳಿ ಸುತ್ತ ಲೆತ್ತತ್ತಲುಂ |
ಮೂಲೆಮೂಲೆಯಲಿ ವಿದ್ಯುಲ್ಲಹರಿಯೊಂದು ||
ಧೂಲಿಕಣ ಭೂಗೋಳ ರವಿ ಚಂದ್ರ ತಾರೆಗಳ |
ಚಾಲಿಪುದು ಬಿಡು ಕೊಡದೆ - ಮಂಕುತಿಮ್ಮ ||
ಮಂಕುತಿಮ್ಮನ ಕಗ್ಗ ಪದ್ಯ- 43 ರ ಅರ್ಥ
ಈ ಪ್ರಪಂಚದೆಲ್ಲಕಡೆ ಒಂದು ತರಹದ ಮಿಂಚಿನ ಹರಿದಾಟ.
ಆ ಮಿಂಚು ಮೇಲೆ, ಕೆಳಗೆ, ಹತ್ತಿರ, ಮೂಲೆ ಮೂಲೆಗಳಲ್ಲಿ ಆವರಿಸಿಕೊಂಡಿದೆ.
ಆ ಮಿಂಚು ಸೂರ್ಯ, ಚಂದ್ರ, ನಕ್ಷತ್ರಗಳು, ಕೊನೆಗೆ ಒಂದು ಕಣವನ್ನು ಸಹ ಚಲಿಸುವಂತೆ ಮಾಡುತ್ತಿದೆ. ಬಿಡುವಿಲ್ಲದೆ.
ಒಂದೇ ಸಮನೆ ಮಾಡುತ್ತಿದೆ.
ಯಾವುದು ಈ ಶಕ್ತಿ?
ಈ ಶಕ್ತಿಯನ್ನು ಕೊಟ್ಟವರು ಯಾರು?
ತಾತ್ಪರ್ಯ :
ಯಾವದೋ ಒಂದು ಶಕ್ತಿ ಈ ಜಗತ್ತಿನ ಚಾಲನೆಗೆ ಕಾರಣವಾಗಿದೆ.
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Forty-Second verse.
Mankutimmana Kagga Verse -43 In English
Mele kelagolage bali sutta lettattalum |
moolemooleyali vidyullahariyondu ||
dhoolikana bhoogola ravi chandra taaregala |
chaalipudu bidu kodade - Mankutimma ||
Mankutimmana Kagga Verse -43 Meaning In English
A kind of lightning spread all over this world.
That lightning is covered above, below, near, in every corner.
That lightning is moving the sun, the moon, the stars, and finally even a particle. Without a break.
Doing the same.
What is this power?
Who gave this power?
Gist:
Some force is responsible for the movement of this world.
Want to improve yourself, see other Verses of Makutimmana Kagga By Clicking Below Links