ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ನಲವತ್ತೆಂಟನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 49
ಪಂಡಿತರೆ ಶಾಸ್ತ್ರಿಗಳೆ ಮಿಥ್ಯೆಯಿಂ ತಥ್ಯಕ್ಕೆ |
ಖಂಡಿತದಿ ಸೇತುವೆಯ ಕಟ್ಟುವೊಡೆ ನೀವು ||
ಕಂಡಿಹಿರ ನರಹೃದಯದಾಳ ಸುಳಿ ಬಿರುಬುಗಳ ? |
ದಂಡವದನುಳಿದ ನುಡಿ - ಮಂಕುತಿಮ್ಮ ||
ಮಂಕುತಿಮ್ಮನ ಕಗ್ಗ ಪದ್ಯ- 49 ರ ಅರ್ಥ
ವಿದ್ವಾಂಸರೆ ಮತ್ತು ಶಾಸ್ತ್ರಗಳನ್ನು ಬಲ್ಲವರೆ, ನೀವು ಸುಳ್ಳನ್ನು ಸತ್ಯದ ಜೊತೆ ಸೇರಿಸಿದಿರಿ.ಸುಳ್ಳಿನಿಂದ ನಿಜಕ್ಕೆ ನೀವು ಸೇತುವೆಯನ್ನು ಕಟ್ಟಿದಿರಿ. ಹೀಗೆ
ಸೇತುವೆ ಕಟ್ಟುವಾಗ ಮನುಷ್ಯನ ಹೃದಯದ ಆಳ, ಸುಳಿ ಮತ್ತು ಕಠಿಣತೆಗಳನ್ನು ನೋಡಿರುವಿರಾ? ಅದರ ಕಲ್ಪನೆ ಇದೆಯಾ?
ಇಲ್ಲವಾದರೆ ನಿಮ್ಮ ಪಾಂಡಿತ್ಯ, ಶಾಸ್ತ್ರಜ್ನ್ಯಾನಗಳೆಲ್ಲವೂ ವ್ಯರ್ಥವೇ ಸರಿ.
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Forty-Eighth verse.
Mankutimmana Kagga Verse -49 In English
Panditare shaastrigale mithyeyim tathyakke |
khanditadi setuveya kattuvode neevu ||
kandihira narahrudayadaala suli birubugala? |
Dandavadanulida nudi - Mankutimma ||
Mankutimmana Kagga Verse -49 Meaning In English
Dear scholars and knowers of scriptures, you have connected falsehood with truth. You have built a bridge from falsehood to truth.
While doing so, have you seen the depth, maelstrom and rigors of a man's heart while building a bridge?Do you have any idea of those?
Otherwise all your knowledge and studies are of no use..
Want to improve yourself, see other Verses of Makutimmana Kagga By Clicking Below Links