ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ನಲವತ್ತೊಂಬತ್ತನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 50
ಮನೆಯೆಲ್ಲಿ ಸತ್ಯಕ್ಕೆ ? ಶ್ರುತಿ ತರ್ಕಮಾತ್ರದೊಳೆ ? |
ಅನುಭವಮುಮದರೊಂದು ನೆಲೆಯಾಗದಿಹುದೇಂ ? ||
ಮನುಜಹೃದಯಾಂಗಣದೊಳೆನಿತೆನಿತೊ ದನಿಯುದಿಸಿ |
ಅಣಕಿಪುವು ತರ್ಕವನು – ಮಂಕುತಿಮ್ಮ ||
ಮಂಕುತಿಮ್ಮನ ಕಗ್ಗ ಪದ್ಯ- 50 ರ ಅರ್ಥ
ಸತ್ಯಕ್ಕೆ ಆಶ್ರಯ ಯಾವುದು? ವೇದ ಶಾಸ್ತ್ರಗಳಲ್ಲಿ ಮತ್ತು ಚರ್ಚೆಗಳಲ್ಲಿ ಮಾತ್ರ ಸತ್ಯ ಇರುತ್ತದೆಯೋ ?
ಎಲ್ಲ ನಮ್ಮ ಅನುಭವಗಳೂ ಸತ್ಯಕ್ಕೆ ಆಶ್ರಯವಾಗಲಾರದೇ? ಈ ಅನುಭವಗಳು ಮನುಷ್ಯನ ಹೃದಯದಲ್ಲಿ ಎಷ್ಟೆಷ್ಟೋ ಭಾವನೆಗಳನ್ನು ಉಂಟುಮಾಡುತ್ತವೆ. ಅವನ ತರ್ಕಗಳನ್ನು ಅಣಕಿಸುತ್ತವೆ.
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Forty-Ninth verse.
Mankutimmana Kagga Verse -50 In English
Maneyelli satyakke? shruruti tarkamaatradole? |
Anubhavamumadarondu neleyaagadihudem? ||
Manujahrdayaanganadolenitenito daniyudisi |
anakipuvu tarkavanu – Mankutimma ||
Mankutimmana Kagga Verse -50 Meaning In English
What is the refuge of truth? Is truth only in Vedic scriptures and debates?
Can't all our experiences be a refuge for truth?
These experiences create so many emotions in the human heart. Mock his logics.
Want to improve yourself, see other Verses of Makutimmana Kagga By Clicking Below Links