ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ಐವತ್ತೆರಡನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 53
ತೃಣಕೆ ಹಸಿರೆಲ್ಲಿಯದು ? ಬೇರಿನದೇ ? ಮಣ್ಣಿನದೇ? |
ದಿನಪನದೇ ? ಚಂದ್ರನದೇ ? ನೀರಿನದೇ ? ನಿನದೆ? ||
ತಣಿತಣಿವ ನಿನ್ನ ಕಣ್ಣಿನ ಪುಣ್ಯವೋ ? ನೋಡು |
ಗುಣಕೆ ಕಾರಣವೊಂದೇ ?- ಮಂಕುತಿಮ್ಮ ||
ಮಂಕುತಿಮ್ಮನ ಕಗ್ಗ ಪದ್ಯ- 53 ರ ಅರ್ಥ
ಹುಲ್ಲು ಹಸಿರು. ಆ ಹಸಿರು ಬಣ್ಣ ಎಲ್ಲಿಂದ ಬಂತು?
ಬೇರಿನಿಂದಲೋ ? ಮಣ್ಣಿನಿಂದಲೋ ಸೂರ್ಯ ನಿಂದನಾ? ಚಂದ್ರನಿಂದನಾ? ಅಥವಾ ಸೃಷ್ಟಿಕರ್ತನಿಂದಲೋ?
ಅಥವಾ ಅದು ಹಸಿರೆಂದು ಬರೀ ನಮಗೆ ಕಾಣಿಸುತ್ತದೆಯೋ?
ಅಂತೂ, ಸೃಷ್ಟಿಯ ಸೊಬಗ ನೀನು ನೋಡುವೆ . ಆನಂದುಸುವೆ . ಅದು ನಿನ್ನ ಕಣ್ಣುಗಳ ಪುಣ್ಯದಿಂದ.
ಇದಕೆಲ್ಲ ಕಾರಣ ಸೃಷ್ಟಿಕರ್ತ. ಉಳಿದೆಲ್ಲವೂ ಕೇವಲ ಮಾಧ್ಯಮಗಳು.
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Fifty second verse.
Mankutimmana Kagga Verse -53 In English
Trunake hasirelliyadu? Berinade? Manninade? |
Dinapanade? Chandranade? Neerinade? Ninade? ||
Tanitaniva ninna kannina punyavo? Nodu |
gunake kaaranavonde?- Mankutimma ||
Mankutimmana Kagga Verse -53 Meaning In English
The grass is green. Where did that green color come from?
From where? From the soil or from the sun? From the moon? Or by the Creator?
Or does it just look green to us?
Also, you will see the beauty of creation. enjoy It is because of the virtue of your eyes.
All this is because of the Creator. Everything else is just media.
Want to improve yourself, see other Verses of Makutimmana Kagga By Clicking Below Links