ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ಐವತ್ತಾರನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 57
ಆಗುಂಬೆಯಸ್ತಮಯ ದ್ರೋಣಪರ್ವತದುದಯ |
ತ್ಯಾಗರಾಜನ ಗಾನ ವಾಲ್ಮೀಕಿ ಕವನ ||
ಆಗಿಸವೆ ತಾವಿವೆಮ್ಮಂತರಂಗದಿ ಸತ್ಯ |
ಯೋಗಪುಲಕಾಂಕುರವ ? - ಮಂಕುತಿಮ್ಮ ||
ಮಂಕುತಿಮ್ಮನ ಕಗ್ಗ ಪದ್ಯ- 57 ರ ಅರ್ಥ
ಪಶ್ಚಿಮ ಘಟ್ಟಗಳಲ್ಲಿರುವ ಆಗುಂಬೆ. ಅಲ್ಲಿಯ ಸೂರ್ಯಾಸ್ತ.
ದ್ರೋಣ ಪರ್ವತ ಅಂದರೆ ಬಾಬಾಬುಡಾನಗಿರಿ. ಅಲ್ಲಿಯ ಸೂರ್ಯೋದಯ.
ತ್ಯಾಗರಾಜರ ಗಾಯನ. ಋಷಿ ವಾಲ್ಮೀಕಿಯವರ ಕವನ. ಅಂದರೆ ರಾಮಾಯಣದ ಶ್ಲೋಕಗಳು.
ಇವುಗಳೆಲ್ಲ ನಿಜವಾಗಿ ನಮ್ಮ ಅಂತರಂಗದಲ್ಲಿ ರೋಮಾಂಚನವನ್ನು ಉಂಟುಮಾಡುತ್ತವೆ.
ಅಲ್ಲವೇ?
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Fifty-sixth verse.
Mankutimmana Kagga Verse -57 In English
Agumbeyastamaya dronaparvatadudaya
tyagarajana gana valmīki kavana
agisave tavivemmantarangadi satya
yogapulakankurava? - Mankutimma
Mankutimmana Kagga Verse -57 Meaning In English
Agumbe is in the Western Ghats. Sunset in Agumbe.
Drona Parvata means Bababudanagiri mountain. Sunrise there in Bababudangiri.
Thyagaraja's singing. A poem by Rishi Valmiki. That means verses of Ramayana.
All of these actually create excitement within us.
Isn't it ?
Want to improve yourself, see other Verses of Makutimmana Kagga By Clicking Below Links