Blog : ಹಿಟ್ಟು ನಾದಲಾರ್ದ ಪಾಲಕ ಪರೋಟ ಮಾಡೋದು ಹೆಂಗ | How To Make Palak Parota Without Kneading
ಹಿಟ್ಟು ನಾದಲಾರ್ದ ಪಾಲಕ ಪರೋಟ ಮಾಡೋದು ಹೆಂಗ | How To Make Palak Parota Without Kneading

ಹಿಟ್ಟು ನಾದಿ ನಾದಿ ಮಾಡಿದ್ರೂನೂ ಪರೋಟ ಸ್ಮೂತ್ ಆಗವೊಲ್ಲುವಾ ?
ಹಿಟ್ಟು ಕಲಿಸಿ ಎಷ್ಟ ಹೊತ್ತು ನೆನಿಸಿದ್ರೂನು ಪರೋಟ ರಟ್ಟ ರಟ್ಟ ಆಗ್ಲಿಕತ್ತಾವ?

ಹಂಗ ಅಂದ್ರ ನೀವೂ ನನ್ನ ಹಂಗ ತ್ರಾಸ ಪಟ್ಟಿರಿ ಅನಸ್ತದ.
ಅದಕ್ಕ ಒಂದು ಸರಳ ಛೋಲೋ ರೀತಿ ಇಂದ ಪರೋಟ ಹೆಂಗ ಮಾಡೋದು ಹೇಳ್ತೇನಿ ನೋಡ್ರಿ.

ನೀವು ಗೋಧಿ ಹಿಟ್ಟಿನಿಂದ ದ್ವಾಶಿ ಮಾಡಿದ್ರೇಂದ್ರ ಇದು ಭಾಳ ಸರಳ ಆಗ್ತದ ನೋಡ್ರಿ.

 

ಪಾಲಕ್ ತಂಬುಳಿ ಹೆಂಗ ಮಾಡೋದು ಗೊತ್ತ? ಇಲ್ಲೆ ನೋಡ್ರಿ 

ಏನೇನು ಬೇಕು?

೧. ಗೋಧಿ ಹಿಟ್ಟು
೨. ಪಾಲಕ್
೩. ಅಡಿಗಿ ಎಣ್ಣಿ
೪. ತುಪ್ಪ
೫. ಉಪ್ಪು
೬. ನೀರು
೭. ಹಸಿಮೆಣಸಿನಕಾಯಿ
೮. ಜೀರಗಿ
೯. ಕೊತಂಬರಿ

ಹೆಂಗ ಮಾಡೋದು?

೧. ಮದ್ಲ ಪಾಲಕ ಸೊಪ್ಪನ್ನ ಸಣ್ಣದಾಗಿ ಹೆಚ್ಚಿ ಚೆಂದಾಗಿ ತೊಳೀರಿ
೨. ಮೆಣಸಿನಕಾಯಿ ಹೆಚ್ಚಿ ಇಟ್ಕೊಳ್ರಿ
೩. ಕೊತಂಬರಿ ಸೊಪ್ಪನ್ನ ಹೆಚ್ಚಿ ಇಟ್ಕೋರಿ
೪. ಹೆಚ್ಚಿದ್ದ ಪಾಲಕ್ ಸೊಪ್ಪು, ಮೆಣಸಿನಕಾಯಿ, ಕೊತಂಬರಿ, ಜೀರಗಿ ಎಲ್ಲಾ ಒಂದ ಮಿಕ್ಸರ್ ಜಾರ್ ಒಳಗ ಗರ್ ಅನಿಸರಿ
೫. ಇನ್ನೊಂದು ದೊಡ್ಡ ಬುಟ್ಟಿಯೊಳಗ ಗೋಧಿ ಹಿಟ್ಟು ತೊಗೋರಿ
೬. ಆ ಹಿಟ್ಟಿಗೆ ರುಬ್ಬಿದ್ದ ಪಾಲಕ್ ಸೊಪ್ಪಿನ ಚಟ್ನಿ ಹಾಕ್ರಿ
೭. ರುಚಿಗೆ ಬೇಕಾದಷ್ಟು ಉಪ್ಪು ಹಾಕ್ರಿ
೮. ಸಲ್ಪ ಸಲ್ಪ ನೀರು ಹಾಕಿ ಹಿಟ್ಟು ಕಲಸಿರಿ
೯. ಹಿಟ್ಟು ಸ್ಮೂತ್ ಆಗಿ ದ್ವಾಶಿ ಹಿಟ್ಟಿನ ಹದಕ್ಕ ಬರೋಹಂಗ ಸೌಟಿನಿಂದ ಕಲಿಸಿರಿ
೧೦. ೨ ಚಮಚ ಅಡಿಗಿ ಎಣ್ಣಿ ಹಾಕಿ ಮತ್ತ ಸೌಟ್ ತಿರಗಾಸಿರಿ
೧೧. ಆ ಹಿಟ್ಟನ್ನ ಒಂದು ೧೦-೧೫ ನಿಮಿಷ ಮುಚ್ಚಿ ಇಡ್ರಿ
೧೨. ಆಮೇಲೆ ಗ್ಯಾಸ್ ಸ್ಟೋವ್ ಇಲ್ಲ ಇಂಡಕ್ಷನ್ ವಲಿ ಇಲ್ಲ ಇಡ್ಲಿ ವಲಿ ಮ್ಯಾಲೆ ಹಂಚ್ ಇಡ್ರಿ (ನೋನ್-ಸ್ಟಿಕ್ ಇದ್ರ ಚೊಲೋ)
೧೩. ಆಮೇಲೆ ದ್ವಾದಶಿ ಹಾಕಿದ ಹಂಗ ಹಿಟ್ಟನ್ನ ಹಂಚ ಮ್ಯಾಲೆ ಹಾಕ್ರಿ
೧೪. ಕಡಿಮಿ ಉರಿಯೊಳಗ ಬೇಯಿಸಿರಿ . ಎರಡು ಕಡೆ ಬೇಯಿಸರಿ
೧೫. ಸ್ವಲ್ಪ ಬೆಂದಮ್ಯಾಲೆ ತುಪ್ಪ ಹಚ್ಚರಿ
೧೬. ಮುಚ್ಚಿಕಾಯಿ ಇಂದ ಅಂಚಿನ ಸುತ್ತಲ ಒತ್ತರಿ (ಎರಡು ಮೂರು ಸರ್ತಿ)
೧೭. ಪರೋಟ ಕಂದು ಬಣ್ಣಕ್ಕ ಬಂದಮ್ಯಾಲೆ ಕೆಳಗ ತಗಿರಿ
೧೮. ಈಗ ಒಂದು ಹೊಸ ಥರದ ಪರೋಟ ಉಪ್ಪಿನಕಾಯಿ ಜೋಡಿ ತಿನ್ನಲಿಕ್ಕೆ ಕೊಡ್ರಿ

ನೋಡ್ರಿವ , ಇದು ಗೋಧಿ ದ್ವಾಶಿಯಿಂದ ರೂಪಾಂತರಗೊಂಡ ಪರೋಟ ಅಂತ ನನಗ ಅನಸ್ತದ. ಯೇನ ಆಗ್ಲಿ ರುಚಿ ಮಾತ್ರ ಮಸ್ತ ಅದ ನೋಡ್ರಿ .