Blog : ಯುವರತ್ನ ಬರ್ತಿದ್ದಾನೆ(Yuvaratna- coming soon)
ಯುವರತ್ನ  ಬರ್ತಿದ್ದಾನೆ(Yuvaratna- coming soon)

ಕೊರೋನಾ ಮಾಹಾಮಾರಿಯ ಆರ್ಭಟದಿಂದ ಬೇಸತ್ತ ಸಿನಿಪ್ರಿಯರಿಗೆ ಮನರಂಜಿಸಲು ಪವರ್ ಸ್ಟಾರ್ ಪುನೀತ್ ರಾಜಕುಮಾರ ಯುವರತ್ನನಾಗಿ ಬರ್ತಿದ್ದಾನೆ.
ಹೊಂಬಾಳೆ ಫಿಲ್ಮಿಂ ಪ್ರೊಢಕ್ಷನ್ ನಲ್ಲಿ ನಿರ್ಮಾಣ ಗೊಂಡಿರುವ,ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವರತ್ನ ಚಿತ್ರವೂ ಏಪ್ರಿಲ್ ೧ ರಂದು ಬಿಡುಗಡೆಯಾಗುತ್ತಿದೆ.ಈ ಚಿತ್ರದ ಹಾಡುಗಳು ತುಂಬಾ ಸೊಗಸಾಗಿದ್ದು,ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರೇ ಸಾಹಿತ್ಯ ಬರೆದಿದ್ದಾರೆ.ಶಾಶಂಕ್ ಶೇಷಗಿರಿ ಅವರು ಹಾಡುಗಳಿಗೆ ಧ್ವನಿ ಕೊಟ್ಟಿದ್ದಾರೆ.
ಈ ಚಿತ್ರದಲ್ಲಿ ಪುನೀತ್ ರಾಜಕುಮಾರ ಅವರು ಯುವರಾಜನಾಗಿ ಯುವತಿಯರ ಮನಸ್ಸನ್ನು ರಂಜಿಸಲಿದ್ದು ,ಡಾಲಿ ಧನಂಜಯ ಅವರು ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ.ಈ ಚಿತ್ರದಲ್ಲಿ ದಿಗಂತ್,ಸೋನುಗೌಡ ಅವರೊಂದಿಗೆ ಸಯೇಶಾ ಚೊಚ್ಚಲ ಬಾರಿಗೆ ಕನ್ನಡದಲ್ಲಿ ಅಭಿನಯಿಸಿದ್ದಾರೆ.

ಏಪ್ರಿಲ್ ೧ ಮಿಸ್ ಮಾಡ್ಕೋಬೇಡಿ.