Dedicated to all the real heroes !!
ಇವತ್ತು ಸ್ವಾತಂತ್ರ್ಯ ಬಂದ ದಿನ..
ಇಡೀ ದೇಶದ ತುಂಬ ರಾಷ್ಟ್ರ ಪ್ರೇಮ ತುಂಬಿ ತುಳುಕಿ,ಉಕ್ಕಿ ಹರಿಯುತ್ತಿದೆ. ಎಲ್ಲರ ಮನೆಯೊಳಗೆ, ಕಾರ್ ಗಳಲ್ಲಿ, ಗಾಡಿಗಳಲ್ಲಿ ದೇಶದ ಧ್ವಜ ರಾರಾಜಿಸುತ್ತಿದೆ..ಎಲ್ಲ ಟೀವೀ ವಾಹಿನಿಗಳಲ್ಲಿ ತ್ರಿವರ್ಣ ರಂಗೇರಿದೆ.."ಸಾರೇ ಜಹಾನ್ ಸೆ ಅಚ್ಛಾ ಹಿಂದೂಸಿತಾ.", "ಒಂದೇ ಮಾತರಂ..""ಜನ ಗಣ ಮನ.." ಕಿವಿಗಳಿಗೆ ಹಬ್ಬ ಉಂಟು ಮಾಡುತ್ತಿವೆ..
ಮಹಾತ್ಮಾ, ನೆಹರು, ಭಗತ್ ಸಿಂಗ, ಸುಭಾಶ್ಚಂದ್ರ ಭೋಸ ಇವರುಗಳನ್ನು ಮತ್ತೆ ಮತ್ತೆ ನೆನಪು ಮಾಡಿ ಕೊಡುತ್ತಿವೆ..
ಅದರೊಡನೆ ನಮ್ಮ ದೇಶವನ್ನು, ಪರೋಕ್ಷವಾಗಿ ನಮ್ಮನ್ನು ಕಾಯುತ್ತಿರುವ ನಮ್ಮ ಹೆಮ್ಮೆಯ ಸೈನಿಕರನ್ನು ಸ್ಮರಿಸುವದು, ಅವರಿಗೆ ಆಭಾರ ಮನ್ನಣೆ ಮಾಡುವದು ಅಷ್ಟೇ ಅತ್ತ್ಯುತ್ತಮ ಕಾಲ..ತಮ್ಮ ಜೀವ ತಮ್ಮದಲ್ಲ ಈ ದೇಶದ್ದು, ದೇಶದ ಜನರದ್ದು..ಅವರ ಜೀವ ತಮ್ಮ ಜೀವಕ್ಕಿಂತ ಅಮೂಲ್ಯ ಅನ್ನೋ ಮನೋಭಾವ ದಿಂದ ಹೋರಾಡುವ ಧನ್ನ್ಯ ಜೀವಗಳನ್ನು ನಾವು ಗೌರವಿಸಲೇ ಬೇಕು..
ಅವರ ಕೆಚ್ಚೆದೆಯ ಜೀವನ ಶೈಲಿಯ ಒಂದು ಉದಾಹರಣೆ ಇವತ್ತು ಟೀವೀ ಯ ಒಂದು ವಾಹಿನಿಯಲ್ಲಿ ನೋಡಲು ಸಿಕ್ತು--ಅದು ವಾಘಾ ಗಡಿಯ ಸ್ವಾತಂತ್ರ್ಯ ದಿನದ ಆಚರಣೆ..ನಮ್ಮ ದೇಶದ ಸೈನಿಕರು ಪೆರೇಡ್ ಮಾಡುತ್ತಾ ಹೋಗಿ ಆ ಕಡೆಯ ಸೈನಿಕರಿಗೆ ಹಸ್ತಲಾಘನ ಮಾಡಿ ಶುಭಾಶಯ ಹೇಳುವ ಸಂಧರ್ಭ..ಈ ರೀತಿಯ ಶಾಸ್ತ್ರ ಮಾಡುವ ಅಭ್ಬ್ಯಾಸ ಯಾರು ಮಾಡಿದರೋ ಯಾಕೆ ಮಾಡಿದರೋ ಗೊತ್ತಿಲ್ಲ..ಹಾಗೆ ಮಾಡುವಾಗ ನಮ್ಮ ವೀರ ಸೈನಿಕರ ಮನೋಭಾವ ನೋಡಬೇಕಿತ್ತು..ವೀರ ಹೆಜ್ಜೆ ಹಾಕುತ್ತಾ ಬೆಂಕಿ ಅಂಥ ಕೋಪದ ಉಂಡೆಗಳನ್ನು ಕಣ್ಣುಗಳಲ್ಲೇ ಉಗುಳುತ್ತಾ ಅವರು ಹೋಗುವದು ನೋಡಿದರೆ ಅವರು ಯುಧ್ಧಕ್ಕೇ ಹೋಗುತ್ತಿದ್ದರೋ ಏನೋ ಅಂತ ಅನಿಸುತ್ತಿತ್ತು..ಇದನ್ನು ಬರೆಯುವಾಗ ಈಗಲೂ ನನ್ನ ಮೈ ಮೇಲೆ ಮುಳ್ಳು ಬರ್ತಾ ಇದೆ !!
ಒಂದೇ ಒಂದು ಅಪ್ಪಣೆ ಬಂದರೆ ಸಾಕು ಈ ಗೊಡ್ಡು ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟು ಎದುರು ಇರುವ ಗೋಮುಖ ವ್ಯಾಘ್ರಗಳನ್ನು ಒಂದೇ ಒಂದು ಕ್ಷಣದಲ್ಲಿ ಸುಟ್ಟು ಬೂದಿ ಮಾಡಿ ಬಿಡುವ ಸಾಮರ್ಥ್ಯ, ಕೆಚ್ಚೆದೆ ಇರುವ ಮತ್ತು ಹಾಗೆ ಮಾಡಲಾಗದ ಅಸಹಾಯಕತೆ ಅವರಲ್ಲಿ, ಅವರ ಕಣ್ಣಲ್ಲಿ ಎದ್ದು ಕಾಣುತ್ತಿತ್ತು..
ಸ್ವಾತಂತ್ರ್ಯ ಕೊಟ್ಟವರನ್ನು ಸ್ಮರಿಸುವದು ಎಷ್ಟು ಮುಖ್ಯವೋ ಅದನ್ನು ನಮ್ಮಿಂದ ಕಿತ್ತು ಬೇರೆಯವರಿಗೆ ಉಡುಗೊರೆಯಾಗಿ ಕೊಡುವ ಕೆಲ ಸ್ವಾರ್ಥ ರಾಜಕಾರಣಿಗಳ ನಡುವೆ ನಿಸ್ವಾರ್ಥ ಸೇವೆ ಮಾಡುವ ನಮ್ಮ ಸೈನಿಕರನ್ನು ನೆನೆಯುವದೇ ನಮ್ಮಿಂದಾಗುವ ಒಂದು ದೊಡ್ಡ ಪುಣ್ಣ್ಯದ ಕೆಲಸ..
ಜೈ ಜವಾನ !!!