ಕಿರಿಕ್ ಪಾರ್ಟಿ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಬಹಳಷ್ಟು ಜನ ಅಭಿಮಾನಿಗಳನ್ನು ಗಿಟ್ಟಿಸಿಕೊಂಡ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್ ನಲ್ಲಿಯೂ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.
ಚಲೋ ,ಗೀತ ಗೋವಿಂದಂ ನಂತಹ ಜನಪ್ರಿಯ ಸಿನೆಮಾಗಳೊಂದಿಗೆ ದಕ್ಷಿಣ ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿರುವ ರಶ್ಮಿಕಾಗೆ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಜೊತೆ ಅಭಿನಯಿಸುವ ಅವಕಾಶ ಈಗ ನನಸಾಗಿದೆ.
ಮಹೇಶ್ ಬಾಬು ಅಭಿನಯದ ೨೬ ನೇ ಸಿನಿಮಾ 'ಸರಿಲೆರು ನೀಕೆವ್ವರು' ದಲ್ಲಿ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಈ ಚಿತ್ರವನ್ನು ಅನಿಲ್ ರವಿ ಪುಡಿ ನಿರ್ದೇಶನ ಮಾಡುತ್ತಿದ್ದಾರೆ.