Blog : Thugs of Hindustan has new heroin
Thugs of Hindustan has new heroin

ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್,'ದಂಗಲ್' ನಂತರ ತೂಕ ಹೆಚ್ಚಿಸಿಕೊಂಡಿದ್ದ ಅಮೀರ್ ಖಾನ್, ಈಗ ಸ್ಲಿಮ್ ಆಗಿದ್ದು ಪೊಗರಸ್ತಾದ ಮೀಸೆ ಮತ್ತು ಉದ್ದನೆಯ ಗಡ್ಡ ಬಿಟ್ಟು 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರಕ್ಕೆ ರೆಡಿಯಾಗಿದ್ದಾರೆ. ಆದರೆ ಈ ಚಿತ್ರದಲ್ಲಿ ಮಹಿಳಾ ಪಾತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಲಿರುವ ನಟಿ ಯಾರು ಗೊತ್ತೇ ?

ಈ ಬಗ್ಗೆ ಈಗ ಹೊಸ ಸುದ್ದಿಯೊಂದು ಕಿವಿ ಇಂದ ಕಿವಿಗೆ ಹರಿದಾಡುತ್ತಿದ್ದು ಸೈಫ್ ಅಲಿ ಖಾನ್ ಮಗಳನ್ನು ಚಿತ್ರಕ್ಕೆ ಕರೆತರುವ ಪ್ಲಾನ್ ಮಾಡುತ್ತಿದ್ದಾರಂತೆ. !!
ಮಿಸ್ಟರ್ ಪರ್ಫೆಕ್ಷನಿಸ್ಟ್, ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ ರನ್ನು 'ಥಗ್ಸ್ ಆಫ್ ಹಿಂದೂಸ್ತಾನ್' ಗೆ ಸೇರಿಸಿಕೊಳ್ಳಲು ಮನಸ್ಸು ಮಾಡಿದ್ದಾರೆ. ಚಿತ್ರಕ್ಕೆ ಯಂಗ್ ಮತ್ತು ಹೊಸ ಪ್ರತಿಭೆ ಬೇಕು ಎನ್ನುವ ಕಾರಣದಿಂದ ಅಮೀರ್ ಈ ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸಾರಾ ಈ ಚಿತ್ರದಲ್ಲಿ ನಟಿಸಿದರೆ 'ಥಗ್ಸ್ ಆಫ್ ಹಿಂದೂಸ್ತಾನ್' ಅವರ ಚೊಚ್ಚಲ ಸಿನಿಮಾ ಆಗಲಿದೆ.
ಬಾಲಿವುಡ್ ನ ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ಆಗಿ ಯಸ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬರಲಿರುವ 'ಥಗ್ಸ್ ಆಫ್ ಹಿಂದೂಸ್ತಾನ್' ಕಳೆದ ವರ್ಷ ಟೈಟಲ್ ಪ್ರಕಟಗೊಂಡ ದಿನದಿಂದಲೂ ಸಿನಿ ಪ್ರಿಯರ ಗಮನಸೆಳೆದಿದೆ. ಇದಕ್ಕೆ ಕಾರಣ ಮೊಟ್ಟ ಮೊದಲ ಬಾರಿಗೆ ಅಮೀರ್ ಖಾನ್ ಜೊತೆಗೆ ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ನಟಿಸುತ್ತಿದ್ದಾರೆ.