Blog : Santheyalli Nintha Kabira
Santheyalli Nintha Kabira
ಬಹಳ ವರ್ಷಗಳ ನಂತರ ಕಾದಂಬರಿ / ನಾಟಕ ಆಧಾರಿತ ಕನ್ನಡ ಚಿತ್ರವೊಂದು ಬರುತ್ತಿದೆ..ಇದು ಸಂತೋಷದ ವಿಚಾರ.
ಹಿಂದಿಯ ಕಾದಂಬರಿಗಾರ ಭೀಷ್ಮ ಸಹಾನಿ ರಚಿಸಿರುವ ನಾಟಕ "ಕಬೀರ್ ಖಡಾ ಬಜಾರ್ ಮ್ಞೇ" ಬಹಳ ಜನಪ್ರೀಯತೆ ಗಳಿಸಿತ್ತು. ಈ ನಾಟಕ 15ನೇ ಶತಮಾನದ ಸಂತ,ಕವಿ ಕಬೀರನ ಸುತ್ತ ಹೆಣೆದ ಕಥೆ.
ನಮ್ಮ ಹೆಮ್ಮೆಯ  ಶ್ರೀ ಗೋಪಾಲ ವಾಜಪೇಯಿ ಅವರು ಈ ನಾಟಕವನ್ನು 'ಸಂತ್ಯಾಗ ನಿಂತಾನ ಕಬೀರ' ಅಂತ ಕನ್ನಡದಲ್ಲಿ ಅನುವಾದಿಸಿದ್ದಾರೆ.ರಾಜ್ಯದ ಒಳ-ಹೊರಗೆಲ್ಲ ನೂರಾರು ಪ್ರಯೋಗಗಳನ್ನು ಕಂಡ ಇದು ಹಲವು ವರ್ಷಗಳ ಹಿಂದೆ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿತ್ತು.
ಇಂತಹ ಇತಿಹಾಸವುಳ್ಳ 'ಸಂತೆಯಲ್ಲಿ ನಿಂತ ಕಬೀರ' ಚಿತ್ರ ಇನ್ನೇನು ಬಿದುಗಡೆಗಾಗಿ ಕಾದಿದೆ. ನಾವೂ ಕೂಡ ಚಿತ್ರವನ್ನು ತೆರೆಯ ಮೇಲೆ ನೋಡಲು ಕಾತುರರಾಗಿದ್ದೇವೆ..
 ಈಗಾಗಲೇ ಚಿತ್ರದ ಬಗ್ಗೆ, ಅದರ ಹಾಡುಗಳ ಬಗ್ಗೆ ಗಾಂಧಿ ನಗರದಲ್ಲಿ ಚರ್ಚೆ ಶುರುವಾಗಿದೆ. ಈ ಚಿತ್ರದ ಹಾಡುಗಳು ಮತ್ತು ಸಂಭಾಷಣೆಯನ್ನು ಶ್ರೀ ಗೋಪಾಲ ವಾಜಪೇಯಿಯವರೇ ಬರೆದಿದ್ದಾರೆ.
ಚಿತ್ರದ ತಂಡಕ್ಕೆ ಶುಭಾಶಯಗಳು !!
ಇನ್ನೂ ಇಂತಹ ಸದಭಿರುಚಿಯ ಚಲನ ಚಿತ್ರಗಳು ಬರಲಿ ಎಂದು ಹಾರೈಕೆ.
 
 

Santheyalli Nintha Kabira is an upcoming Kannada movie based on the drama- "Kabir Khada Bazaar Mein" written by well known Hindi writer Bheeshma Sahani. Kannada writer Gopal Vajapeyi had translated the drama to -"Santyaga Nintana Kabira" ,in Kannada. The drama was staged within and outside Karnataka. The book by the same name was published. Now Shivarajkumar starrer movie is being released. We wish all the best for the movie team.