Blog : Rashmika as Pushpa | ಪುಷ್ಪಾ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ
Rashmika as Pushpa | ಪುಷ್ಪಾ  ಪಾತ್ರದಲ್ಲಿ ರಶ್ಮಿಕಾ ಮಂದಣ್ಣ


ಸ್ಟೈಲಿಶ್ ಸ್ಟಾರ್ ಅಲ್ಲೂ ಅರ್ಜುನ್ ಹಾಗೂ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರವೇ "ಪುಷ್ಪಾ".

ಈ ಚಿತ್ರದಲ್ಲಿ ಅರಣ್ಯ ಅಧಿಕಾರಿ ಪಾತ್ರದಲ್ಲಿ ನಮ್ಮ ಕಿರಿಕ್ ಹುಡುಗಿ ಮಿಂಚಿದ್ದಾಳೆ.

ಈ ಚಿತ್ರವೂ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಪಂಚ ಭಾಷೆಯಲ್ಲಿ ನಿರ್ಮಾಣ ವಾಗಿದೆ.

ಇದೆ ಶುಕ್ರವಾರ ೧೭ರಂದು ಏಕಕಾಲಕ್ಕೆ ತೆಲುಗು ಹಾಗೂ ಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ.


ಈ ಚಿತ್ರದಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲೂ ಅರ್ಜುನ್ ಅವರು ಕುಖ್ಯಾತ ಚಂದನ ಕಳ್ಳಸಾಗಣೆಕಾರನಾಗಿ ಕಾಣಿಸಿಕೊಳ್ಳುತ್ತಾನೆ.ಕಿರಿಕ್ ಹುಡುಗಿ ರಶ್ಮಿಕಾ "ಪುಷ್ಪಾ" ಎಂಬ ಅರಣ್ಯಾಧಿಕಾರಿ ಪಾತ್ರವನ್ನು ತುಂಬಾ ಅಚ್ಚುಕಟ್ಟಾಗಿ ನಿಭಾಯಿಸಿದ್ದಾಳೆ.


ಈ ಚಿತ್ರದಲ್ಲಿ ಅರಣ್ಯಾಧಿಕಾರಿಯಾಗಿರುವ ಪುಷ್ಪಾ ಕಳ್ಳಸಾಗಣೆಕಾರನಾಗಿರುವ ನಾಯಕ ಅಲ್ಲೂ ಅರ್ಜುನನನ್ನು ಹಿಡಿದು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತಾಳೆ .

ಈ ಸಮಯ ಇಬ್ಬರಿಗೂ ಪ್ರೇಮ ಮೂಡುತ್ತದೆ.

ಕಳ್ಳಸಾಗಣೆಕಾರನಾಗಿ ಪಾತ್ರ ನಿರ್ವಹಿಸುತ್ತಿರುವ ಅಲ್ಲೂ ಅರ್ಜುನ್ ನನ್ನ ಬದಲಾಯಿಸುವಲ್ಲಿ ತುಂಬಾ ಶ್ರಮಪಡುತ್ತಾಳೆ.

ಇಷ್ಟರ ನಡುವೆ ಪುಷ್ಪಾಳ ಕೊಲೆಯಾಗುತ್ತದೆ.

ಕೊಲೆಮಾಡಿದವರ ವಿರುದ್ಧ ದ್ವೇಷ ತೀರಿಸಿಕೊಳ್ಳಲು ನಾಯಕ ಅಲ್ಲೂ ಅರ್ಜುನ್ ಮತ್ತೆ ಹಳೆ ಹಾದಿಯನ್ನೇ ಹಿಡಿಯುತ್ತಾನೆ.