ಕುಂಭ ಮೇಳ
ಕುಂಭ ಮೇಳ ಹಿಂದೂ ಧರ್ಮದ ಸಾಮೂಹಿಕ ತೀರ್ಥಯಾತ್ರೆ.ವಿಶ್ವದ ಅತಿದೊಡ್ಡ ಧಾರ್ಮಿಕ ಉತ್ಸವ.ಜೀವನದಲ್ಲಿ ಒಮ್ಮೆಯಾದರೂ ಲಕ್ಷ ಲಕ್ಷ ಜನ ಸೇರುವ ಈ ಧಾರ್ಮಿಕ ಉತ್ಸವದಲ್ಲಿ ಪಾಲ್ಗೊಳ್ಳಲೇ ಬೇಕಾಗುತ್ತದೆ.ಕುಂಭ ಮೇಳ ಅಂದ್ರೇನೆ ಅಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಜನ ಸಾಗರವೇ ತುಂಬಿರುತ್ತದೆ.ಭಾರತದ ಜನಸಾಗರವಷ್ಟೇ ಅಲ್ಲ ,ವಿದೇಶಗಳಿಂದಲೂ ಜನರು ಪುಣ್ಯ ಸ್ನಾನ ಮಾಡಲು ಬರುತ್ತಾರೆ.
೪೮ ದಿನಗಳು ನಡೆಯುವ ಈ ಕುಂಭ ಮೇಳದಲ್ಲಿ ೨೧ ಲಕ್ಷ ಭಕ್ತಾದಿಗಳು ಸೇರುವ ಪುಣ್ಯ ಧಾರ್ಮಿಕ ಉತ್ಸವವಾಗಿದೆ.ಹಿಂದೂ ಧರ್ಮದಲ್ಲಿ ಕುಂಭ ಮೇಳಕ್ಕೆ ಬಹು ದೊಡ್ಡ ಸ್ಥಾನಮಾನ ವಿದೆ.ಪ್ರತಿ ವರ್ಷವೂ ಅಲಹಾಬಾದ್ ನಲ್ಲಿ ಮಾಘಮೇಳ ನಡೆಯುತ್ತದೆ.ಪ್ರತಿ ೬ ವರ್ಷಕ್ಕೊಮ್ಮೆ ಹರಿದ್ವಾರ ಮತ್ತು ಪ್ರಯಾಗದಲ್ಲಿನಡೆಯುವ ಕುಂಭ ಮೇಳವನ್ನು ಅರ್ಧ ಕುಂಭ ಮೇಳ ಅಂತ ಕರೆಯುತ್ತಾರೆ.ಪ್ರತಿ ೧೨ ವರ್ಷಕ್ಕೊಮ್ಮೆ೪ ನದಿ ತೀರಗಳ ಮೇಲೆ ನಡೆಯುವ ಅತಿದೊಡ್ಡ ಉತ್ಸವವೇ ಪೂರ್ಣ ಕುಂಭ ಮೇಳ.ಗಂಗಾ,ಯಮುನೆ,ಸರಸ್ವತಿ ಈ ಮುರು ನದಿಗಳ ಸಂಗಮ ವಾಗಿರುವ ಅಲಹಾಬಾದ್,ಗಂಗಾ ನದಿ ತೀರದ ಹರಿದ್ವಾರ ಹಾಗು ಗೋದಾವರಿ ನದಿ ದಂಡೆಯ ನಾಸಿಕ ಮತ್ತು ಶಿಪ್ರಾ ನದಿ ಮೇಲ್ದಂಡೆಯ ಉಜ್ಜಯಿನಿ ಈ ನಾಲ್ಕು ಪವಿತ್ರ ಸ್ಥಳಗಳಲ್ಲಿ ಕುಂಭ ಮೇಳ ನಡೆಯುತ್ತದೆ.ಹಾಗೆಯೇ ಮಹಾ ಕುಂಭ ಮೇಳ ಅಂದ್ರೆ ೧೨ ಪೂರ್ಣ ಕುಂಭ ಮೇಳ ಒಟ್ಟಾಗಿ ಅಂದ್ರೆ ೧೪೪ ವರ್ಷಗಳಿಗೊಮ್ಮೆ ಅಲಹಾಬಾದ್ ನಲ್ಲಿ ಆಚರಿಸಲಾಗುತ್ತದೆ.ಹಿಂದೂ ಧರ್ಮದ ಪ್ರಕಾರ ಈ ಮಹಾ ಕುಂಭ ಮೇಳದಲ್ಲಿ ಜನ ಸಾಗರದಲ್ಲಿ ಸ್ನಾನ ಮಾಡುವುದೇ ಮೋಕ್ಷ ಸಾಧನವಾಗಿದೆ.
ಕುಂಭ ಮೇಳದಲ್ಲಿ ಒಟ್ಟು ೬ ವಿಶೇಷ ದಿನಗಳಂದು ಪವಿತ್ರ ಸ್ನಾನ ನಡೆಯುತ್ತದೆ.ಮಕರ ಸಂಕ್ರಾಂತಿ,ಮೌನಿ ಅಮಾವಾಸ್ಯೆ ಮತ್ತು ವಸಂತ ಪಂಚಮಿ ಹಾಗು ಪುಷ್ಯ ಹುಣ್ಣಿಮೆ ದಿನಗಳಲ್ಲಿ ಪವಿತ್ರ ಸ್ನಾನ ಮಾಡಲು ಭಕ್ತಾದಿಗಳು ಹಾತೊರೆಯುತ್ತಾರೆ.
ಈ ಕುಂಭ ಮೇಳದಲ್ಲಿ ಸಾಧು ಸಂತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.ಈ ಸಾದು ಸಂತರಿಂದ ಕೂಡಿಕೊಂಡು ಮಾಡುವ ಪವಿತ್ರ ಸ್ನಾನಕ್ಕೆ ಶಾಹಿ ಸ್ನಾನವೆಂದು ಕರೆಯುತ್ತಾರೆ.ಕುಂಭ ಮೇಳದ ದಿನ ಭ್ರಾಹ್ಮಿಮುಹೂರ್ತದಲ್ಲಿ ಸಾಧು ಸಂತರು ಸ್ನಾನ ಮಾಡುತ್ತಾರೆ.ಆ ನಂತರವೇ ಜನಸಾಮಾನ್ಯರಿಗೆ ಅವಕಾಶ ಸಿಗುತ್ತದೆ.