ತಂದೆ ತಾಯಿ ಇಲ್ಲದ ೨೦೦ ಕೋಟಿ ಬೆಲೆ ಬಾಳುವ ಕಾಫಿ ಎಸ್ಟೇಟ್ ನ ಒಡತಿ ಮೈಥಿಲಿ ( ರಾಧಿಕ ಚೇತನ್) ಆಗಿರುತ್ತಾಳೆ. ಆ ಎಸ್ಟೇಟ್ ನಲ್ಲಿ ಹೋಂಸ್ಟೇ ನಡೆಸುತ್ತಿರುತ್ತಾರೆ.ಹೋಂ ಸ್ಟೇ ಹುಡುಕಿಕೊಂಡು ಚಾಮಿ (ರಾಹುಲ್) ಎಸ್ಟೇಟ್ ಗೆ ಬರುತ್ತಾನೆ.ಫಾಮಿಲಿ ಲಾಯರ್ ಆಗಿ ನಿರಂಜನ್ (ರಘು ಮುಖರ್ಜಿ) ಇರುತ್ತಾನೆ. ಈ ಇಬ್ಬರು ಮೈಥಿಲಿ ಜೀವನ ದಲ್ಲೂ ಬರುತ್ತಾರೆ.ಈ ತ್ರಿಕೋನ ಪ್ರೇಮ ಪ್ರಣಯ ದಲ್ಲಿ ಕೊನೆಗೆ ಮೈಥಿಲಿ ಚಾಮಿ ಜೊತೆಗೆ ವಿವಾಹ ವಾಗುತ್ತಾಳೆ. ಇನ್ನೇನೂ ಎಲ್ಲಾ ಸರಿಯಾಯಿತು ಅನ್ನು ವಷ್ಟರಲ್ಲಿ ಮೈಥಿಲಿ ಕೊಲೆ ನಡೆಯುತ್ತದೆ.ಕಾಫಿ ಎಸ್ಟೇಟ್ ನಲ್ಲಿ ನಡೆದ ಈ ಕೊಲೆ ಯಾರು ಮಾಡಿದರು ಎನ್ನುವುದೇ ಸಿನಿಮಾದ ಕಥೆ.
ಈ ಚಿತ್ರದ ಮೊದಲ ಅರ್ಧ ದಲ್ಲಿ ಪ್ರೀತಿ ಪ್ರೇಮ ಪ್ರಣಯ ಸನ್ನಿವೇಶ ಗಳನ್ನೂ ಸೃಷ್ಟಿಸುವಲ್ಲಿ ಯಶಸ್ವಿ ಆಗಿರುವ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರು ದ್ವಿತೀಯಾರ್ಧದಲ್ಲಿ ಒಂದೊಂದೇ ತಿರುವುಗಳನ್ನು ಕೊಟ್ಟು ಗಂಭೀರವಾಗಿಸಿ ಕುತೂಹಲ ಹೆಚ್ಚಿಸುವಲ್ಲಿ ಸೈ ಎನಿಸಿಕೊಂಡಿದ್ದಾರೆ.
ಈ ಚಿತ್ರದ ಮೂಡಿ ಬಂಡ ಗೀತೆಗಳು ಮನಸ್ಸಿಗೆ ಆನಂದ ನೀಡುವದರೊಂದಿಗೆ ಈಗಾಗಲೇ ಬಾರಿ ಸದ್ದು ಮಾಡಿವೆ.
ನಿರ್ದೇಶಕ ಟಿ.ಎನ್. ಸೀತಾರಾಮ್ ಅವರ ಧಾರಾವಾಹಿ ಗಳನ್ನೂ ಇಷ್ಟಪಡುವ ಜನರಿಗೆ ಈ ಸಿನಿಮಾ ಕೂಡ ಇಷ್ಟ ಆಗುತ್ತದೆ.ಎಂದಿನಂತೆ ಧಾರಾವಾಹಿಗಳಲ್ಲಿ ನಿರ್ದೇಶಕರು ಸೃಷ್ಟಿಸುವ ಕೋರ್ಟ್ ಸನ್ನಿವೇಶಗಳು ಈ ಚಿತ್ರದಲ್ಲೂ ಇರುವದರಿಂದ ಸೀತಾರಾಮ್ ಅವರ ಅಪ್ಪಟ್ಟ ಅಭಿಮಾನಿಗಳ ಮನತಣಿಸುತ್ತದೆ.
ಪ್ರೇಕ್ಷಕರಿಗೆ ಒಂದು ನಿಗೂಢ ಕಾಫಿತೋಟಕ್ಕೆ ಪ್ರವೇಶಿಸಿ ಬಂದ ಅನುಭವ ಆಗುತ್ತದೆ. ಕ್ಷಣ ಕ್ಷಣ ಕ್ಕೂ ಮುಂದೇನಾಗುತ್ತದೆ ಎಂಬ ಕಾತರತೆ ಮೂಡಿಸುತ್ತದೆ.