Blog : Johnny Lever in Sandal wood
Johnny Lever in Sandal wood

ಹಲವು ವಿಶೇಷತೆಗಳ 'ಗರ'

 

ಕನ್ನಡ ಚಿತ್ರರಂಗ ಹಲವಾರು ಪ್ರಯೋಗಗಳನ್ನು ಕಾಣುತ್ತಿದೆ..ಪ್ರತಿ ಸಿನೆಮಾದಲ್ಲೊಂದು ವಿಶೇಷತೆ ಸಿಗುತ್ತದೆ..ಹೊಸ ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ ಪರಿಚಯ ಆಗುತ್ತಿವೆ.
'ಗರ' ಈ ಯಾದಿಗೆ ಹೊಸ ಸೇರ್ಪಡೆ.
ಮುರುಳಿ ಕೃಷ್ಣ ಅವರು ಬರೆದು,ನಿರ್ಮಿಸಿ ನಿರ್ದೇಶಿಸುತ್ತಿರುವ 'ಗರ' ದಿಂದ ಹಿಂದಿ ಚಿತ್ರರಂಗದ ಮಹಾನ ಹಾಸ್ಯ ನಟ ಜಾನೀ ಲೀವರ್ ಕನ್ನಡಕ್ಕೆ ಪಾದಾರ್ಪಣೆ ಮಾಡಲಿದ್ದಾರೆ !
ಇನ್ನೊಂದು ವಿಶೇಷ ಅಂದರೆ ಕಿರು ತೆರೆಯ ಸುದ್ದಿ ನಿರೂಪಕ (news anchor) ರೆಹಮಾನ್ ನಾಯಕ ನಟನಾಗಿದ್ದಾರೆ. 'ಬಿಗ್ ಬಾಸ್' ನಿಂದ ಸಾಕಷ್ಟು ಪ್ರಸಿದ್ದಿ ಪಡೆದಿದ್ದ ರೆಹಮಾನ್ ಹೊಸ ಇನಿಂಗ್ಸ್ ಆರಂಭಿಸುತ್ತಿದ್ದಾರೆ.
ಇನ್ನೂ ಖ್ಯಾತ ಗಾಯಕಿ ಮಂಜುಳಾ ಗುರುರಾಜ್ ಅವರ ಪುತ್ರ ಸಾಗರ್ ಅವರು ಸಂಗೀತ ನಿರ್ದೇಶನ ಮಾಡಲಿದ್ದಾರೆ..

ಹಲವು ವಿಶೇಷತೆಗಳಿಂದ ಕೂಡಿರುವ 'ಗರ' ತೆರೆಯ ಮೇಲೆ ಚೆನ್ನಾಗಿ ಮೂಡಿಬಂದು ಯಶಸ್ಸು ಕಾಣಲಿ ಎಂದು shmoti ತಂಡ ಹಾರೈಸುತ್ತದೆ.