Blog : Invitation Card After Corona Effect
Invitation Card After Corona Effect

ಹಾಗೆ ಸಲ್ಪ ಹಾಸ್ಯಕ್ಕಾಗಿ

ಕೊರೊನದಿಂದ ಮುಂಬರುವ ಜೀವನದ ಶೈಲಿಯಲ್ಲಿ ತುಂಬಾ ಬದಲಾವಣೆಗಳಾಗಲಿವೆ.
ನಮ್ಮ, ನಮ್ಮವರ ಸುರಕ್ಷತೆಗಾಗಿ ನಾವು ಬದಲಾಗಬೇಕು.


ಹಾಗಾದರೆ ಬದಲಾದ ಶೈಲಿಯಲ್ಲಿ ಮದುವೆಯ ಆಮಂತ್ರಣ ಪತ್ರಿಕೆ ಹೀಗೂ ಇರಬಹುದೇ?
ನೋಡಿ ಹಾಗಾದರೆ !!

--------------------------------------------------------
ಗುರುಹಿರಿಯರ ಆಶೀರ್ವಾದದೊಂದಿಗೆ ಹಾಗೂ ಜಿಲ್ಲಾಧಿಕಾರಿಯವರ ಒಪ್ಪಿಗೆಯೊಂದಿಗೆ,

ನಮ್ಮ ಮನೆಯಲ್ಲಿ ಈ ಶುಭ ಸಮಾರಂಭ ನಿಶ್ಚಯಿಸಿರುತ್ತೇವೆ.

ಈ ಪ್ರಯುಕ್ತ ತಾವು ಸಾಧ್ಯವಾದರೆ ಬನ್ನಿ. ಇಲ್ಲವೆಂದಲ್ಲಿ ಕಾರ್ಯಕ್ರಮದ ಲೈವ್ ಇರುತ್ತದೆ ಅಲ್ಲಿಂದಲೇ ಶುಭಹಾರೈಸಿ.

ಬರಲೇಬೇಕೆಂದವರು ದಯವಿಟ್ಟು ಬರುವಾಗ ಕಾಣಿಕೆ ಇಲ್ಲದಿದ್ದರೂ ಸರಿ, ಆದರೆ ಮಾಸ್ಕ ಹಾಕಿಕೊಂಡು ಬನ್ನಿ.

ಜೊತೆಗೆ covid 19 negative report ತಪ್ಪದೇ ತೆಗೆದುಕೊಂಡು ಬನ್ನಿ ಮತ್ತು ದೂರದಿಂದಲೇ ಶುಭಕೋರಿ.

ಸೂಚನೆ : ಊಟ ಪಾರ್ಸಲ್ ಮಾತ್ರ .

ತಮ್ಮ ಸುಖಾಗಮನ ಬಯಸುವವರು :

ಗುರು ಹಿರಿಯರು, ಜಿಲ್ಲಾಡಳಿತ, ವೈದ್ಯರು, ಪೋಲಿಸರು ಮತ್ತು ಆಶಾ ಕಾರ್ಯಕರ್ತೆಯರು.