ಅಳುಕು ಅಳುಕಿನೊಳಗ ದಿನ ಕಳಿದರ
ಬೆಳಕು ಕಾಣುವದು ಹೆಂಗ..
ಮನಸಿನೊಳಗ ತೇಲಿ ಬಂದ
ಭಾವಗಳು ಅಪ್ಪಳಿಸಿತಾವ ಎದಿಗಿ
ಅವಕ್ಕ ಗುದ್ದಿ ಗುದ್ದಿ ಎದ್ದು ಹೋಗಬೇಕ
ಆಗ ಕನಸಿನ ಹಾದಿ ಸಿಗತದ
ಹೊಳೆ ಹೊಳೆವ ಹುಳಗಳ
ಬೆಳಕು ಚೆಲ್ಲಿ ಚೆಲ್ಲಿ ಮುಂದ ಮುಂದ
ದೂಕತಾವ ಆಗ
ನಗುವ ಮ್ಯಾಲಿನವ ತಾನ
ನಿನ್ನ ಕೂಡಿ ಭಾಳ ದೂರ ನಡೀತಾನ
ನಿನ್ನ ಬೆಳಕಿನ ಉರಿಗೆ ಬಿಡತಾನ..