Blog : Eggless Omelette Recepie
Eggless Omelette Recepie

ಸಾಮಾನ್ಯವಾಗಿ ಆಮ್ಲೆಟ್ ಅಂದರೆ ಮೊಟ್ಟೆಯಿಂದ ತಯಾರಿಸಿದ ತಿಂಡಿ ಅಂತ ಎಲ್ಲರ ಭಾವನೆ. ಆದರೆ ಮೊಟ್ಟೆಯನ್ನು ಬಳಸದೇ ತರಕಾರಿ ಆಮ್ಲೆಟ್ ಅನ್ನು ಬಹಳ ಸುಲಭವಾಗಿ ಅತೀ ಕಡಿಮೆ ಸಮಯದಲ್ಲಿ ಮಾಡಬಹುದು.
ತರಕಾರಿ ಆಮ್ಲೆಟ್ ಮಾಡಲು ಏನು ಬೇಕು,ಹೇಗೆ ಮಾಡಬೇಕು ಅಂತ ನೋಡೋಣ:

ಸಮಯ: 10 ನಿಮಿಷ

ಸಾಮಾಗ್ರಿಗಳು :

ಕಡಲೆ ಹಿಟ್ಟು : 1/4 ಕಪ್
ಮೈದಾ ಹಿಟ್ಟು : 1 ಚಮಚ
ನೀರು : 1/3 ಕಪ್
ಬೇಕಿಂಗ್ ಪೌಡರ್ : 1/4 ಚಮಚ
ಉಪ್ಪು : ರುಚಿಗೆ ತಕ್ಕಷ್ಟು
ಈರುಳ್ಳಿ :ಸಣ್ಣಗೆ ಹೆಚ್ಚಿದ್ದು 1 ಚಮಚ
ಕೊತಂಬರಿ :ಸಣ್ಣಗೆ ಹೆಚ್ಚಿದ್ದು 1 ಚಮಚ
ಹಸಿ ಮೆಣಸಿನಕಾಯಿ : ಸಣ್ಣಗೆ ಹೆಚ್ಚಿದ್ದು 1/2 ಚಮಚ
ಬೆಣ್ಣೆ : 1 ಚಮಚ
ಕರಿ ಮೆಣಸು :1/4 ಚಮಚ ಪುಡಿ ಮಾಡಿದ್ದು

ವಿಧಾನ :
1. ಒಂದು ಬುಟ್ಟಿಯಲ್ಲಿ ಕಡಲೆಹಿಟ್ಟು,ಮೈದಾ ಹಿಟ್ಟು,ಬೇಕಿಂಗ್ ಪೌಡರ್,ಉಪ್ಪು ಹಾಕಿ ಚೆನ್ನಾಗಿ ಕಲಿಸಿಕೊಳ್ಳಿ
2. ನೀರು ಹಾಕಿ ಗಂಟುಗಳಿಲ್ಲದಂತೆ ನುಣ್ಣಗೆ ಕಲಿಸಿಕೊಳ್ಳಿ. ಹದ ದೋಸೆ ಹಿಟ್ಟಿಗಿಂತ ಸಲ್ಪ ನೀರಾಗಿರಬೇಕು
3. ಒಲೆ ಮೇಲೆ ಹಂಚು ಇಟ್ಟು ,ಕಾದ ನಂತರ ಬೆಣ್ಣೆ ಸವರಬೇಕು
4. ಈಗ ಹಿಟ್ಟನ್ನು ಹಂಚಿನಮೇಲೆ ಹಾಕಿ
5. ಈಗ ಕರಿ ಮೆಣಸಿನ ಪುಡಿಯನ್ನು ಹಿಟ್ಟಿನಮೇಲೆ ಸುತ್ತಲ್ಲೂ ಉದುರಿಸಿ
6. 2 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿರಿ
7. ಆಮ್ಲೆಟ್ಟನ್ನತಿರುಗಿ ಹಾಕಿ 1-2 ನಿಮಿಷ ಬೇಯಿಸಿರಿ
8. ಬಿಸಿ ವೆಜಿಟೇಬಲ್ ಆಮ್ಲೆಟ್ ರೆಡಿ ಟು ಸರ್ವ್