Blog : Avane Shrimannarayana the Philosophical Thought in Kannada
Avane Shrimannarayana the Philosophical Thought in Kannada

'ಅವನೇ ಶ್ರೀಮನ್ನಾರಾಯಣ'  ಒಂದು ತಾರ್ಕಿಕ ಚಿಂತನೆ 

'ಅವನೇ ಶ್ರೀಮನ್ನಾರಾಯಣ'' ಹೊಚ್ಚ ಹೊಸ ಕನ್ನಡ ಚಿತ್ರ... ತುಂಬು ಚಿತ್ರಮಂದಿರಗಲ್ಲಿ ಓಡುತ್ತಿದೆ.

ಕನ್ನಡದಲ್ಲಿ ಚಿತ್ರೀಕರಣವಾದ ಚಿತ್ರ ತಮಿಳು,ತೆಲುಗು ಮತ್ತು ಮಲಯಾಳಂ ಗಳಲ್ಲಿ ಡಬ್ ಆಗಿ ತೆರೆಗೊಂಡಿದೆ. ಹಿಂದಿಯಲ್ಲಿ ಸದ್ಧ್ಯದಲ್ಲೆ ಬಿಡುಗಡೆ ಆಗಲಿದೆ.

ಇದೊಂದು ಕಾಲ್ಪನಿಕ ಹಾಸ್ಯ ಧಾಡಸಿ ಚಿತ್ರ.

ಈ ಚಿತ್ರದ ಕಥೆ,ಅದರ ತರ್ಕ ನಿಮಗೆ ಅರ್ಥವಾಗಿರಬಹುದು. ಅಥವಾ ಅರ್ಥ ಆಗಿರಲಕ್ಕೆ ಇಲ್ಲ.

'ಅವನೇ ಶ್ರೀಮನ್ನಾರಾಯಣ' ಚಿತ್ರದ ತಂಡದೊಂದಿಗೆ ನಮಗೆ ಮಾತನಾಡುವ ಅವಕಾಶ ಬಂದಿದ್ದು, ವಿಸ್ತೃತವಾಗಿ ಚಿತ್ರದ ಬಗ್ಗೆ ಮಾತನಾಡಿದೆವು.

ನಮ್ಮ ಮಾತುಕತೆಗಳ, ಸಿನೆಮಾದ ತರ್ಕದ ಸಾರಾಂಶ ಹೀಗಿದೆ:

೧. ನಿಮಗೆಲ್ಲ ಭಾರತೀಯ ಪುರಾಣದ 'ಸಮುದ್ರ ಮಂಥನ' ಕಥೆ ಗೊತ್ತಿದೆಯಷ್ಟೆ ಅಲ್ಲವೇ ?
ದೇವತೆಗಳ-ಅಸುರರ ಮಧ್ಯ ಯುಧ್ಧ ಆಗ್ತಾ ಇರುತ್ತದೆ. ಆಗ ದೇವತೆಗಳೆಲ್ಲರೂ ನಾರಾಯಣ ಬಳಿ ಹೋಗಿ ರಕ್ಷಿಸಲು ಹೇಳುತ್ತಾರೆ. ನಾರಾಯಣನು ಅವರೆಲ್ಲರಿಗೂ ಸಮುದ್ರ ಮಂಥನ ಮಾಡಿ, ಆಗ ಅಮೃತ ಸಿಗುತ್ತದೆ, ಯಾರು ಅಮೃತ ಪಾನ ಮಾಡುತ್ತಾರೋ ಅವರು ಅಮರರಾಗುತ್ತಾರೆ ಎಂದು ಸೂಚಿಸುತ್ತಾನೆ.

ಹಾಲಿನ ಸಮುದ್ರದಲ್ಲಿ ಮಂದರ ಪರ್ವತವನ್ನು ಕುಡಗೋಲು ಮಾಡಿ, ವಾಸುಕಿ ಎಂಬ ನಾಗರನನ್ನು ಹಗ್ಗ ಮಾಡಿ ಕಡಿಯಲು (ಮಂಥನ) ಮಾಡಲು ಶುರು ಮಾಡುತ್ತಾರೆ. ಆಗ ಆ ಮಂಥನದಿಂದ ಒಳ್ಳೆಯ ವಸ್ತುಗಳು, ಕೆಟ್ಟ ವಸ್ತುಗಳೂ ಹಾಲಿನ ಸಮುದ್ರದಿಂದ ಆಚೆ ಬರುತ್ತವೆ. ಅವುಗಳಲ್ಲಿ ಚಂದ್ರ, ಲಕ್ಷ್ಮೀ ದೇವಿ, ಹಾಲಾಹಲ ವಿಷ, ಪಾರಿಜಾತ ವೃಕ್ಷ ಇತ್ಯಾದಿ ಗಳು ಪ್ರಮುಖ ವಾದವುಗಳು.

ದೇವತೆಗಳು ಒಳ್ಳೆಯ ವಸ್ತುಗಳನ್ನು (ಸಾತ್ವಿಕ)ತೆಗೆದುಕೊಂಡು ಒಳ್ಳೆಯ ಕೆಲ್ಸಗಳಲ್ಲಿ ತೊಡಗುತ್ತಾರೆ. ರಾಕ್ಷಸರು ಕ್ಷಣಿಕ ಸುಖಕ್ಕಾಗಿ ಉಪಯೋಗವಿಲ್ಲದ ವಸ್ತುಗಳನ್ನು ತೆಗೆದುಕೊಂಡು ಕೆಟ್ಟದಾದ ಕಾರ್ಯಗಳಲ್ಲಿ ತೊಡಗಿ ಪಾಪ ಪಡೆದುಕೊಳ್ಳುತ್ತಾರೆ.

ನಮ್ಮೆಲ್ಲರಲ್ಲೂ ನಾರಾಯಣ ಮತ್ತು ರಾಕ್ಷಸ ಇರುತ್ತಾನೆ.

ಹೀಗೆ ಪ್ರತಿಯೊಬ್ಬ ಮಾನವರಲ್ಲೂ ಪ್ರತಿ ದಿನವೂ ಮನಸ್ಸು ಎಂಬ ಸಾಗರದಲ್ಲಿ ಮಥನ ನಡೀತಾನೇ ಇರುತ್ತದೆ. ನಮ್ಮಲ್ಲಿರುವ ಈ ನಾರಾಯಣ ಮತ್ತು ರಾಕ್ಷಸರ ಈ ಮಂಥನದಿಂದ ಕೆಲವು ಒಳ್ಳೆಯ ವಿಚಾರಗಳು, ಕೆಲವು ಕೆಟ್ಟ ವಿಚಾರಗಳು ಬರುತ್ತವೆ. ನಾವು ಒಳ್ಳೆಯ ವಿಚಾರ ಮಾಡಿ ಕರ್ಮಾ ಮಾಡಿದರೆ ಒಳ್ಳೆಯ ಫಲ ದೊರೆಯುತ್ತದೆ ಹಾಗೇ ಕೆಟ್ಟ ಯೋಚನೆಗಳಿಗೆ ಒತ್ತು ಕೊಟ್ಟು ಕೆಟ್ಟ ಕರ್ಮ ಮಾಡಿದರೆ ಕೆಟ್ಟ ಫಲ ದೊರೆಯುತ್ತದೆ.

೨. ಮೇಲೆ ತಿಳಿಸಿದಂತೆ ಲಕ್ಷೀ ದೇವಿಯು ಸಮುದ್ರ ಮಥನ ಮಾಡುವಾಗ ಉದ್ಭವಿಸುತ್ತಾಳೆ.

ಲಕ್ಷ್ಮೀ ದೇವಿಯು ಸಂಪತ್ತಿನ ಹಾಗು ಸ್ತ್ರೀ ಯ ಪ್ರತೀಕ.

ಪುರುಷನಾದವನು ಈ ಸಂಪತ್ತು ಹಾಗು ಸ್ತ್ರೀಯನ್ನು ಪಡೆಯಲು ಬಯಸುತ್ತಾನೆ.

ಹಾಗೆ,'ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲಿ ನಾರಾಯಣ ಎಂಬ ನಾಯಕನು ನಾಯಕಿಯನ್ನೂ ಮತ್ತು ನಿಧಿಯನ್ನು ಬಯಸುತ್ತಾನೆ. ಕೊನೆಗೆ ಎರಡನ್ನೂ ಪಡೆಯುತ್ತಾನೆ.

ಹೀಗೆ ರಕ್ಷಿತ್ ಶೆಟ್ಟಿ ಅವರು ಪೌರಾಣಿಕ ಹಿನ್ನೆಲೆಯ ತರ್ಕಗಳಿಂದ ಚಿತ್ರ ಕಥೆ ಹೆಣೆದಿದ್ದು ಅದಕ್ಕೆ ಹಾಸ್ಯವನ್ನು ಲೇಪಿಸಿದ್ದಾರೆ.

ಈ ಚಿತ್ರದ ಸಂದೇಶ ಅಥವಾ ತರ್ಕ ಯಾರಿಗೆ ಹೇಗೆ ಬೇಕೋ ಹಾಗೆ ಅರ್ಥೈಸಬಹುದು. ಅದು ಅವರ ವಿಚಾರಕ್ಕೆ, ಅನಿಸಿಕೆಗೆ ಬಿಟ್ಟದ್ದು.
ನಿಮಗೆ ಏನಾದರೂ ಅನಿಸಿಕೆ ಗಳಿದ್ದರೆ ಕಾಮೆಂಟ್ ಬಾಕ್ಸಾಲ್ಲಿ ಬರೆದು ತಿಳಿಸಿ.

ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ,'ಅವನೇ ಶ್ರೀಮನ್ನಾರಾಯಣ' ಕ್ಲಿಕ್ ಮಾಡಿ.