Blog : 777 ಚಾರ್ಲಿ (777 charlie)
777 ಚಾರ್ಲಿ (777 charlie)


 ಸದಾ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಕಿರಿಕ್ ಪಾರ್ಟಿ ಚಿತ್ರದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈ ಬಾರಿ ಮುದ್ದಿನ ಶ್ವಾನ 'ಚಾರ್ಲಿ' ಸುತ್ತ ಕಥೆ ಹೆಣೆದು ಚಿತ್ರ ತಯಾರಿಸಿದ್ದಾರೆ.ಆ ಚಿತ್ರದ ಹೆಸರೇ "777 ಚಾರ್ಲಿ".
ಜೂನ್ 6 ರಂದು ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ.ರಕ್ಷಿತ್ ಶೆಟ್ಟಿ ಬರ್ತಡೇ ಪ್ರಯುಕ್ತ '777 ಚಾರ್ಲಿ' ಚಿತ್ರದ ಅಫೀಶಿಯಲ್ ಟೀಸರ್ 'ಲೈಫ್ ಆಫ್ ಚಾರ್ಲಿ' ಬಿಡುಗಡೆಯಾಗಿದೆ
  ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಯವರು ಪ್ರತಿ ಶಾಟ್ ನಲ್ಲಿಯೂ ೨ ಬಿಸ್ಕತ್ತುಗಳನ್ನು ಕೈ ಬೆರಳುಗಳ ಮಧ್ಯೆ ಇಟ್ಟಿಕೊಂಡು ನಟನೆಮಾಡಿದ್ದಾರಂತೆ .ಈ ಚಿತ್ರದಲ್ಲಿ ಮುದ್ದಾದ ಶ್ವಾನ "ಚಾರ್ಲಿ" ಮುಖ್ಯ ಪಾತ್ರವಹಿಸುತ್ತಿದ್ದು ಅದರೊಂದಿಗೆ ನಟಿಸುವುದು ರಕ್ಷಿತ್ ಶೆಟ್ಟಿ ಅವರಿಗೆ ಬಹಳ ಕಷ್ಟದಾಯಕ ವಾಗಿದೆ.
ಈ ಸಿನಿಮಾದಲ್ಲಿ ಸಂಗೀತಾ ಶೃಂಗೇರಿ ಅವರು ನಾಯಕಿಯಾಗಿ ನಟಿಸಿದ್ದಾರೆ. 'ಡ್ರಾಮಾ ಜ್ಯೂನಿಯರ್ಸ್' ಖ್ಯಾತಿಯ ಶಾರ್ವರಿ ಕೂಡ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
   ಈ ಚಿತ್ರವೂ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿಏಕ ಕಾಲಕ್ಕೆ ಬಿಡುಗಡೆಯಾಗುತ್ತಿದೆ.ಟೀಸರ್‌ ನಿಂದಲೇ ಪ್ರೇಕ್ಷಕರ ಕುತೂಹಲ ಮೂಡಿಸಿರುವ ಈ ಚಿತ್ರವೂ ಅಕ್ಟೋಬರ್‌ನಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.