ಹುಟ್ಟಿದವರು ಸಾಯಲೇಬೇಕು ಎಂಬದು ದೇವರ ನಿಯಮ. ಸಾಯುವದು ಖಚಿತವಾದಮೇಲೆ ಹಾಗೆ ಹುಟ್ಟಿ ಕೆಲ ಕಾಲ ಇದ್ದು ಸತ್ತುಹೋದರೆ ಈ ಮಾನವ ಜನ್ಮಕ್ಕೂ, ಪ್ರಾಣಿಗಳ ಜನ್ಮಕ್ಕೂ ಏನು ಅಂತರ?
ಮಾನವರ ಜನ್ಮ ಸಾರ್ಥಕವಾಗಬೇಕೆಂದರೆ ಏನಾದರೂ ಸಾಧಿಸಿ ಹೋಗಬೇಕು.
ಯಶಸ್ಸು ಹಾಗೇ ಮಾರುಕಟ್ಟೆಯಲ್ಲಿ ಸಿಗುವದಿಲ್ಲ.. ಅದನ್ನು ಘಳಿಸಬೇಕು, ಸಂಪಾದಿಸಬೇಕು. ರಾತ್ರೋ ರಾತ್ರಿ ಯಾರು ಸಾಧನೆಯ ಬೆಟ್ಟ ಹತ್ತುವದಿಲ್ಲ. ಸಾಧನೆ, ಯೆಶಸ್ಸು ಇದು ಒಂದು ಪ್ರಯಾಣ (ಜರ್ನಿ).
ಹಾಗಾದರೆ ಯೆಶಸ್ಸು ಪಡೆಯಲು ಏನುಮಾಡಬೇಕು?
ಯೆಶಸ್ಸು ಪಡೆದವರು ಏನು ಮಾಡುತ್ತಾರೆ, ಅವರ ದಿನಚರಿಯೇನು ಎಂದು ನೋಡಬೇಕು. ಹಲವು ಯೆಶಸ್ವಿ ಸಾಧಕರ ದಿನಚರಿ ಅಧ್ಯನ ಮಾಡಿ ಕೆಳಗಿನ ಕೆಲವು ಅಂಶಗಳನ್ನು ಪಟ್ಟಿಮಾಡಲಾಗಿದೆ.
ಇವುಗಳಲ್ಲಿ ಸಾಧಕರು ಬೆಳಿಗ್ಗೆ ಈ ೬ ಅಭ್ಯಾಸಗಳನ್ನು ರೂಢಿ ಮಾಡಿಕೊಂಡಿದ್ದಾರೆ.
೧. Silence (ಮೌನ)
೨. Affirmation (ಧನಾತ್ಮಕವಾಗಿ ಚಿಂತಿಸುವದು)
೩. Visualization (ದೃಶ್ಶೀಕರಣ )
೪. Exercise (ವ್ಯಾಯಾಮ)
೫. Reading (ಓದುವದು)
೬. Scribing (ಬರೆಯುವದು )
ಒಟ್ಟಿನಲ್ಲಿ ಅದು S - A -V -E -R -S
ಇವುಗಳ ವಿವರಣೆಯನ್ನು ಮುಂದಿನ ಭಾಗಗಳಲ್ಲಿ ನೋಡೋಣ