Rangayana Dharwad Natakotsava 2024
-----------------------------------------------------
ರಂಗಾಯಣ ಧಾರವಾಡವು ರಂಗ ತಂಡಗಳಿಗೆ ನಾಟಕ ತರಬೇತಿ ಕಾರ್ಯಾಗಾರದಲ್ಲಿ ಸಿದ್ಧಗೊಂಡ ಹಾಗೂ ಸ್ಥಳೀಯ ತಂಡಗಳಿಂದ ಡಿ.28 ಹಾಗೂ 29 ರಂದು ಸಂಜೆ 6.00ಕ್ಕೆ ಪಂ.ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ “ರಂಗಾಯಣ ನಾಟಕೋತ್ಸವ”ವನ್ನು ಹಮ್ಮಿಕೊಂಡಿದೆ.
ಅಪರ ಜಿಲ್ಲಾಧಿಕಾರಿಗಳಾದ ಡಾ.ಸಿ.ಡಿ ಗೀತಾ ಅವರು ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ. ರಂಗ ನಿರ್ದೇಶಕರಾದ ಹುಲುಗಪ್ಪ ಕಟ್ಟಿಮನಿ ಅವರು ಅತಿಥಿಗಳಾಗಿ ಆಗಮಿಸಲಿದ್ದಾರೆ. ರಂಗಾಯಣ ನಿರ್ದೇಶಕರಾದ ಡಾ.ರಾಜು ತಾಳಿಕೋಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಡಿ.28 ರಂದು ಸಂಜೆ 6.30ಕ್ಕೆ ರಮೇಶ ಕರಬಸಮ್ಮನವರ ಕಥೆ, ನಿರ್ದೇಶಿಸಿದ ಅಂಗುಲಿಮಾಲ ದೊಡ್ಡಾಟ ಪ್ರಸಂಗವನ್ನು ಹುಬ್ಬಳ್ಳಿ ಜನಪದ ಕಲಾಬಳಗ ಟ್ರಸ್ಟ್(ರಿ) ಅವರು ಪ್ರಸ್ತುತಪಡಿಸಲಿದ್ದಾರೆ.
ಡಿ.29 ರಂದು ಸಂಜೆ 6.30ಕ್ಕೆ ನಾಟಕ ರೂಪ ಜಿ.ಪಿ ರಾಜರತ್ನಂ, ಗಾಯತ್ರಿ ಮಹಾದೇವ ಹೆಗ್ಗೋಡು ಅವರು ಪರಿಕಲ್ಪನೆ, ವಿನ್ಯಾಸ, ನಿರ್ದೇಶಿಸಿದ ಬಾಹುಬಲಿ ವಿಜಯ(ಪಂಪನ ಆದಿಪುರಾಣದ ಆಯ್ದ ಕಥಾ ಭಾಗ) ನಾಟಕವನ್ನು ಧಾರವಾಡ ಆಟ-ಮಾಟ ತಂಡ ಪ್ರಸ್ತುತಪಡಿಸಲಿದ್ದಾರೆ.
-----------------------------------------------------
Date :- 28th Dec 2024
Drama :- Angulumala
Time :- 6:30 PM
------------------------------
Date :- 29th Dec 2024
Drama - Baahubali Vijay
Time :- 6:30 PM
-----------------------------